ಮೇ 10ರೊಳಗೆ ಭಾರತೀಯ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವಂತೆ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು಼ ಪುನರುಚ್ಚರಿಸಿದ್ದಾರೆ.

ಮಾಲೆ: ಮಾಲ್ಡೀವ್ಸ್‌ನಲ್ಲಿರುವ ಎಲ್ಲಾ ಭಾರತೀಯ ಸೈನಿಕರನ್ನು ಮೇ 10ರೊಳಗೆ ವಾಪಸ್‌ ಕರೆಸಿಕೊಳ್ಳಬೇಕು ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಸೋಮವಾರ ಪುನರುಚ್ಚರಿಸಿದ್ದಾರೆ.

ಮೊದಲ ಸಂಸತ್‌ ಅಧಿವೇಶನಲ್ಲಿ ಮಾತನಾಡಿದ ಅವರು, ಮಾಲ್ಡೀವ್ಸ್‌ನಲ್ಲಿರುವ 88 ಭಾರತೀಯ ಸೈನಿಕರನ್ನು ಮೇ 10ರೊಳಗೆ ಮರಳಿ ಕರೆಸಿಕೊಳ್ಳಬೇಕು.

ಮಾ.10ರಂದು ಮೊದಲ ತಂಡ ಭಾರತಕ್ಕೆ ಮರಳಬೇಕು ಎಂದು ಹೇಳಿದ್ದಾರೆ.

ಇದಲ್ಲದೇ ಮಾಲ್ಡೀವ್ಸ್‌ಗೆ ಸೇರಿದ ಎಲ್ಲಾ ಭೂ ಪ್ರದೇಶಗಳನ್ನು ನಾವು ಮರಳಿ ವಶಪಡಿಸಿಕೊಳ್ಳುತ್ತೇವೆ.

ರಾಷ್ಟ್ರದ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುವ ಸಂಗತಿಗಳನ್ನು ನಿರ್ಬಂಧಿಸುತ್ತೇವೆ ಎಂದು ಹೇಳಿದರು.