ತಾಜ್‌ಗೆ ಭೇಟಿ ನೀಡಿ ಸೌಂದರ್ಯಕ್ಕೆ ಮಾರುಹೋದ ಮುಯಿಜು

| Published : Oct 09 2024, 01:44 AM IST

ಸಾರಾಂಶ

5 ದಿನಗಳ ಭಾರತ ಪ್ರವಾಸದಲ್ಲಿರುವ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರು ಮಂಗಳವಾರ ಆಗ್ರಾದಲ್ಲಿನ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್‌ಗೆ ಭೇಟಿ ನೀಡಿದರು.

ಆಗ್ರಾ: 5 ದಿನಗಳ ಭಾರತ ಪ್ರವಾಸದಲ್ಲಿರುವ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರು ಮಂಗಳವಾರ ಆಗ್ರಾದಲ್ಲಿನ 7 ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್‌ಗೆ ಭೇಟಿ ನೀಡಿದರು. ಈ ವೇಳೆ, ‘ತಾಜ್‌ ಸೌಂದರ್ಯವನ್ನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ’ ಎಂದು ಕೊಂಡಾಡಿದರು.

ಮುಯಿಜು ಮತ್ತು ಅವರ ಪತ್ನಿ ಸಜಿದಾ ಮೊಹಮ್ಮದ್‌ ಆಗ್ರಾಗೆ ಬಂದಿಳಿಯುತ್ತಿದ್ದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪರವಾಗಿ ಸಚಿವ ಯೋಗೇಂದ್ರ ಉಪಾಧ್ಯಾಯ ಅವರು ಸ್ವಾಗತಿಸಿಕೊಂಡರು. ಬಳಿಕ ಬೆಳಗ್ಗೆ 8-10 ಗಂಟೆವರೆಗೆ ತಾಜ್‌ ಮಹಲ್‌, ಪಕ್ಕದ ಶಿಲ್ಪಗ್ರಾಮ್‌ಗೆ ಮುಯಿಜು ದಂಪತಿ ಭೇಟಿ ನೀಡಿದರು.

‘ಇಲ್ಲಿನ ಒಂದೊಂದು ಸೂಕ್ಷತೆಗಳು ಪ್ರೀತಿ ಮತ್ತು ವಾಸ್ತು ಶಿಲ್ಪಕ್ಕೆ ಸಾಕ್ಷಿ. ಇವುಗಳನ್ನು ಹೊಗಳಲು ಪದಗಳು ಸಾಲದು’ ಎಂದು ಮುಯಿಜು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.