ಯುಪಿಎ ಅವಧಿಯಲ್ಲಿ 10 ವರ್ಷ ಒಬ್ಬರೇ ಪಿಎಂ: ಮೋದಿಗೆ ಖರ್ಗೆ ತಿರುಗೇಟು

| Published : May 22 2024, 01:02 AM IST / Updated: May 22 2024, 06:40 AM IST

ಯುಪಿಎ ಅವಧಿಯಲ್ಲಿ 10 ವರ್ಷ ಒಬ್ಬರೇ ಪಿಎಂ: ಮೋದಿಗೆ ಖರ್ಗೆ ತಿರುಗೇಟು
Share this Article
  • FB
  • TW
  • Linkdin
  • Email

ಸಾರಾಂಶ

ಇಂಡಿಯಾ ಕೂಟ ಅಧಿಕಾರಕ್ಕೆ ಬಂದಲ್ಲಿ ವರ್ಷಕ್ಕೊಬ್ಬರು ಪ್ರಧಾನಮಂತ್ರಿಯಾಗುತ್ತಾರೆ ಎಂದು ಹೇಳಿದ್ದ ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿ ಯುಪಿಎ ಅವಧಿಯಲ್ಲಿ ಸತತ 10 ವರ್ಷಕ್ಕೆ ಒಬ್ಬರೇ ಪ್ರಧಾನಮಂತ್ರಿಯಾಗಿ ಇದ್ದರು ಎಂದು ನೆನಪಿಸಿದ್ದಾರೆ.

ಚಂಡೀಗಢ: ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಐದು ವರ್ಷಕ್ಕೆ ಐದು ಪ್ರಧಾನಿಗಳು ಆಡಳಿತ ನಡೆಸಲಿದ್ದಾರೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಮಾತಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ತಿರುಗೇಟು ನೀಡಿದ್ದಾರೆ. ‘2004ರಲ್ಲಿಯೂ ಇದೇ ರೀತಿ ಹೇಳಲಾಗಿತ್ತು. ಆದರೆ ಯುಪಿಎ ಮನಮೋಹನ್ ಸಿಂಗ್ ಸತತ 10 ವರ್ಷ ಒಬ್ಬರೇ ಪ್ರಧಾನಿಯಾಗಿ ಅಧಿಕಾರ ನಡೆಸಿದರು’ ಎಂದಿದ್ದಾರೆ.

ಮೇ 16ರಂದು ಪ್ರತಾಪಗಢ ಎಲೆಕ್ಷನ್ ರ್‍ಯಾಲಿ ವೇಳೆ ಪ್ರಧಾನಿ ಮೋದಿ ‘ಇಂಡಿಯಾ ಮೈತ್ರಿಕೂಟ ಐದು ವರ್ಷಕ್ಕೆ ಐದು ಪ್ರಧಾನಿಗಳನ್ನು ಮಾಡಬೇಕಂತಿದೆ. ಆದರೆ ಜೂ.4ರ ಬಳಿಕ ವಿಭಜನೆಯಾಗಲಿದೆ’ ಎಂದಿದ್ದರು.

ಮೋದಿ ಮಾತನ್ನು ಅಲ್ಲಗೆಳೆದಿದ ಖರ್ಗೆ, ‘ಯುಪಿಎ 2 ಅವಧಿಯಲ್ಲಿ ಇತರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ಆಗ ನಾವು ಪೂರ್ಣಾವಧಿ ಮುಗಿಸಿದ್ದೇವೆ. 10 ವರ್ಷಗಳ ಕಾಲ ಒಬ್ಬರೇ ಪ್ರಧಾನಿಯಾಗಿದ್ದರು. ಪಂಜಾಬ್ ನೆಲದಿಂದ ಬಂದ ಮನಮೋಹನ್ ಸಿಂಗ್ ದೇಶದ ಆರ್ಥಿಕತೆಯನ್ನು ಬದಲಿಸಿದ್ದರು’ ಎಂದರು.