ಹೆಲಿಕಾಪ್ಟರ್‌ ಹತ್ತುವ ವೇಳೆ ಆಯತಪ್ಪಿ ಬಿದ್ದ ಮಮತಾ ಬ್ಯಾನರ್ಜಿ

| Published : Apr 28 2024, 01:15 AM IST / Updated: Apr 28 2024, 05:22 AM IST

ಹೆಲಿಕಾಪ್ಟರ್‌ ಹತ್ತುವ ವೇಳೆ ಆಯತಪ್ಪಿ ಬಿದ್ದ ಮಮತಾ ಬ್ಯಾನರ್ಜಿ
Share this Article
  • FB
  • TW
  • Linkdin
  • Email

ಸಾರಾಂಶ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೆಲಿಕಾಪ್ಟರ್‌ ಹತ್ತುವ ವೇಳೆ ಆಯತಪ್ಪಿ ಬಿದ್ದ ಘಟನೆ ಶನಿವಾರ ಪಶ್ಚಿಮ ಬರ್ಧಮಾನ್ ಜಿಲ್ಲೆಯ ದುರ್ಗಾಪುರದಲ್ಲಿ ನಡೆದಿದೆ.

ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೆಲಿಕಾಪ್ಟರ್‌ ಹತ್ತುವ ವೇಳೆ ಆಯತಪ್ಪಿ ಬಿದ್ದ ಘಟನೆ ಶನಿವಾರ ಪಶ್ಚಿಮ ಬರ್ಧಮಾನ್ ಜಿಲ್ಲೆಯ ದುರ್ಗಾಪುರದಲ್ಲಿ ನಡೆದಿದೆ.

ಟಿಎಂಸಿ ನಾಯಕಿಯೂ ಆದ ಮಮತಾ ಬ್ಯಾನರ್ಜಿ ಕುಲ್ತಿ ಜಿಲ್ಲೆಗೆ ಚುನಾವಣಾ ರ್‍ಯಾಲಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಕಾರ್ ನಿಂದ ಇಳಿದ ಮಮತಾ ಹೆಲಿಕಾಪ್ಟರ್‌ ನೊಳಗೆ ತಮ್ಮ ಆಸನದಲ್ಲಿ ಕುಳಿತುಕೊಳ್ಳುವ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಘಟನೆಯಲ್ಲಿ ಮಮತಾ ಬ್ಯಾನರ್ಜಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆ ಸಂಭವಿಸುತ್ತಿದ್ದಂತೆ ದೀದಿ ಭದ್ರತಾ ಸಿಬ್ಬಂದಿಗಳು ಅವರ ನೆರವಿಗೆ ಆಗಮಿಸಿದರು. ಬಳಿಕ ಚೇತರಿಸಿಕೊಂಡು ಕುಲ್ತಿಯತ್ತ ಮಮತಾ ಹೊರಟರು.

ಇತ್ತೀಚೆಗೆ ಮನೆಯಲ್ಲಿ ಆಯತಪ್ಪಿ ಬಿದ್ದು ಮಮತಾ ಬ್ಯಾನರ್ಜಿ ಹಣೆಗೆ ಏಟು ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು.