ಸಾರಾಂಶ
ಇಂದಿನ ಮೋದಿ ಪ್ರಮಾಣ ವಚನಕ್ಕೆ ಮಮತಾ ಬಹಿಷ್ಕಾರ ಹಾಕಿದ್ದು, ಭವಿಷ್ಯದಲ್ಲಿ ಅಧಿಕಾರಕ್ಕೆ ಹಕ್ಕು ಮಂಡನೆ ಮಾಡುವ ಕುರಿತು ದೀದಿ ಇಂಗಿತ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ನರೇಂದ್ರ ಮೋದಿ ವಿರುದ್ಧ ಈ ಸಲ ಜನರು ಚುನಾವಣೆಯಲ್ಲಿ ಮತ ಹಾಕಿದರು. ಆದರೂ ಅವರು ಜನಾದೇಶ ಧಿಕ್ಕರಿಸಿ ಮತ್ತೆ ಪ್ರಧಾನಿ ಆಗಲು ಹೊರಟಿದ್ದಾರೆ.
ಹೀಗಾಗಿ ಅವರ ಭಾನುವಾರದ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಟಿಎಂಸಿ ಬಹಿಷ್ಕರಿಸಲಿದೆ ಎಂದು ಪಕ್ಷದ ಮುಖ್ಯಸ್ಥೆ ಹಾಗೂ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಅಲ್ಲದೆ, ಬಿಜೆಪಿಗೆ ಏಕಾಂಗಿಯಾಗಿ ಬಹುಮತವಿಲ್ಲ. ಹೀಗಾಗಿ ಮೋದಿ ಸರ್ಕಾರ ಎಷ್ಟು ದಿನ ಉಳಿಯುತ್ತೋ ಗೊತ್ತಿಲ್ಲ. ಒಂದೇ ದಿನಕ್ಕೆ ಸರ್ಕಾರ ಬಿದ್ದ ಉದಾಹರಣೆ ಇವೆ.
ಇಂಡಿಯಾ ಕೂಟ ಈಗ ಸರ್ಕಾರ ರಚನೆಗೆ ಯತ್ನ ಮಾಡದೇ ಇರಬಹುದು. ಆದರೆ ಮುಂದೆ ಮಾಡಲೇಬಾರದು ಎಂದೇನಿಲ್ಲ ಎಂದೂ ಮಮತಾ ಹೇಳಿದ್ದಾರೆ.