ನವವರ್ಷದ ಹರ್ಷದ ನಡುವೆಯೇ, ಜ.1ರಿಂದ ಜನಜೀವನದ ಮೇಲೆ ಪರಿಣಾಮ ಬೀರುವ ಹಲವು ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಕೆಲ ಪ್ರಮುಖ ಮಾರ್ಪಾಡುಗಳು ಇಂತಿವೆ.
ಆದಾಯ, ಪಾವತಿ, ಬ್ಯಾಂಕಿಂಗ್‌ನಲ್ಲಿ ಮಾರ್ಪಾಡುಐಟಿಆರ್ ಪ್ರಕ್ರಿಯೆ ಸರಳ, ಸರ್ಕಾರಿ ನೌಕರರ ವೇತನ ಹೆಚ್ಚಳ
ನವದೆಹಲಿ: ನವವರ್ಷದ ಹರ್ಷದ ನಡುವೆಯೇ, ಜ.1ರಿಂದ ಜನಜೀವನದ ಮೇಲೆ ಪರಿಣಾಮ ಬೀರುವ ಹಲವು ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಕೆಲ ಪ್ರಮುಖ ಮಾರ್ಪಾಡುಗಳು ಇಂತಿವೆ.
ಪಿಎಂ ಕಿಸಾನ್:ಮುಂದಿನ ವರ್ಷದಿಂದ ಪಿಎಂ ಕಿಸಾನ್ ಯೋಜನೆಯಡಿ ಸೌಲಭ್ಯಗಳನ್ನು ಪಡೆಯಲು ರೈತರು ವಿಶೇಷ ಕಿಸಾನ್ ಐಡಿ ಹೊಂದುವುದು ಕಡ್ಡಾಯವಾಗಲಿದೆ. ರೈತರ ಭೂ ದಾಖಲೆಗಳು, ಬೆಳೆ ಮಾಹಿತಿ, ಆಧಾರ್ ಮತ್ತು ಬ್ಯಾಂಕ್ ವಿವರಗಳು ಈ ಐಡಿಗೆ ಲಿಂಕ್ ಆಗಿರಲಿವೆ. ಯೋಜನೆಯ ದುರುಪಯೋಗ ತಡೆದು, ಅರ್ಹರಷ್ಟೇ ಅದರ ಲಾಭ ಪಡೆಯುವಂತೆ ಮಾಡಲು ಈ ನಿಯಮ ಜಾರಿಗೆ ತರಲಾಗಿದೆ. 8ನೇ ವೇತನ ಆಯೋಗ:
ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳವನ್ನು ಸೂಚಿಸಲಾಗಿರುವ 8ನೇ ವೇತನ ಆಯೋಗದ ಶಿಫಾರಸುಗಳು ಜ.1ರಿಂದ ಜಾರಿಗೆ ಬರಲಿವೆ. ಪಿಂಚಣಿದಾರರಿಗೆ ಸಿಗುವ ಪಿಂಜಣಿಯೂ ಹೆಚ್ಚಳವಾಗಲಿದೆ. ಯುಪಿಐ:ಹೆಚ್ಚುತ್ತಿರುವ ಸೈಬರ್ ವಂಚನೆ ಹಾಗೂ ಅಪರಾಧಗಳಿಗೆ ಕಡಿವಾಣ ಹಾಕಲು, ಡಿಜಿಟಲ್ ಪಾವತಿ ವ್ಯವಸ್ಥೆಯಾಗಿರುವ ಯುಪಿಐನಲ್ಲಿ ಕೆಲ ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಇನ್ನುಮುಂದೆ ಮೊಬೈಲ್ ಸಿಮ್ ದೃಢೀಕರಣ ಕಡ್ಡಾಯವಾಗಲಿದೆ. ಸಿಮ್ ದೃಢೀಕರಣ:
ಯುಪಿಐಗೆ ಮಾತ್ರವಲ್ಲ, ಸಂವಹನ ಆ್ಯಪ್‌ಗಳಾದ ವಾಟ್ಸಪ್, ಟೆಲಿಗ್ರಾಂಗಳ ಬಳಕೆಗೂ ಸಿಮ್ ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ, ಇವುಗಳಲ್ಲಾಗುವ ಅಕ್ರಮಗಳ ಪತ್ತೆ ಸುಲಭವಾಗಲಿದೆ. ಕ್ರೆಡಿಟ್ ಸ್ಕೋರ್ ನವೀಕರಣ:ಇನ್ನುಮುಂದೆ ಕ್ರೆಡಿಟ್ ಬ್ಯೂರೋಗಳು ಸಾಪ್ತಾಹಿಕವಾಗಿ ಕ್ರೆಡಿಟ್ ಸ್ಕೋರ್‌ಗಳನ್ನು ನವೀಕರಿಸುತ್ತವೆ. ಈ ಮೊದಲು ಇದನ್ನು 15 ದಿನಗಳಿಗೊಮ್ಮೆ ಮಾಡಲಾಗುತ್ತಿತ್ತು. ಇದರಿಂದ ಸಾಲ ಮರುಪಾವತಿಯು ಕ್ರೆಡಿಟ್ ಸ್ಕೋರ್‌ಗೆ ಬೇಗ ಸೇರ್ಪಡೆಯಾಗಿ, ಸಾಲ ಪಡೆಯುವ ಅರ್ಹತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.ಇಂಧನ ಬೆಲೆ:
ಗೃಹಬಳಕೆ, ವಾಣಿಜ್ಯ, ವಾಯುಯಾನ ಟರ್ಬೈನ್ ಇಂಧನ(ಎಟಿಎಫ್) ಸೇರಿದಂತೆ ವಿವಿಧ ಇಂಧನಗಳ ಬೆಲೆಗಳಲ್ಲಿ ಭಾರೀ ವ್ಯತ್ಯಾಸವಾಗಲಿದೆ. ನಿಖರ ಬೆಲೆ ಬದಲಾವಣೆ ಘೋಷಣೆಯಾಗದಿದ್ದರೂ, ಇವುಗಳು ಇಳಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಐಟಿಆರ್ ಫೈಲಿಂಗ್:2026ರಿಂದ ಐಟಿಆರ್ ಫೈಲಿಂಗ್ ಪ್ರಕ್ರಿಯೆ ಸರಳವಾಗಿರಲಿದೆ. ಸಂಬಳ, ಬ್ಯಾಂಕ್ ಬಡ್ಡಿ, ಹೂಡಿಕೆ, ದೊಡ್ಡ ವೆಚ್ಚಗಳಂತಹ ಮಾಹಿತಿಗಳು ಮೊದಲೇ ಸ್ವಯಂಚಾಲಿತವಾಗಿ ಭರ್ತಿಯಾಗಿರುತ್ತವೆ. ಇದರಿಂದ ಪ್ರಕ್ರಿಯೆ ವೇಗವಾಗಿಯೂ ಆಗುತ್ತದೆ.
==ಆಧಾರ್-ಪಾನ್ ಲಿಂಕ್ ಆಗಿಲ್ಲವೇ? ಇಂದೇ ಕೊನೆ ದಿನ, ಲಿಂಕ್ ಮಾಡಿ
ನವದೆಹಲಿ: ಪಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಡಿ.31 ಕೊನೆಯ ದಿನಾಂಕವಾಗಿದೆ. ಆ ಬಳಿಕ ಲಿಂಕ್ ಆಗದ ಪಾನ್ ಕಾರ್ಡ್‌ಗಳು ನಿಷ್ಕ್ರಿಯಗೊಳ್ಳಲಿವೆ.2023ರ ಜೂ.30ಂದು ಆಧಾರ್ ಪಾನ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿತ್ತು. ಆ ಬಳಿಕ 1000 ರು. ದಂಡ ಪಾವತಿಸಿ ಲಿಂಕ್ ಮಾಡುವ ಅವಕಾಶವನ್ನು ಆದಾಯ ತೆರಿಗೆ ಇಲಾಖೆಯು ಕಲ್ಪಿಸಿತ್ತು. ಆದರೆ ಈಗ ಈ ಎಲ್ಲ ವಿಧಾನಗಳಿಗೂ ಕೊನೆಯ ದಿನಾಂಕ ಡಿ.31 ಆಗಿದೆ. ಹೀಗಾಗಿ ಇದಾದ ಬಳಿಕ ಲಿಂಕ್ ಆಗದ ಪಾನ್ ಕಾರ್ಡ್‌ಗಳು ನಿಷ್ಕ್ರಿಯಗೊಳ್ಳಲಿವೆ.