ಕೇರಳದ ಪಾಲಕ್ಕಾಡ್‌ ರೈಲು ವಿಭಾಗದಿಂದ ಮಂಗಳೂರು ಹಾಗೂ ಕರ್ನಾಟಕದ ಕೆಲವು ರೈಲ್ವೆ ನಿಲ್ದಾಣ/ಮಾರ್ಗಗಳನ್ನು ಪ್ರತ್ಯೇಕಿಸಿ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರಿಸಿದ್ದನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಸ್ಪಷ್ಟಪಡಿಸಿದ್ದಾರೆ.

ತಿರುವನಂತಪುರಂ: ಕೇರಳದ ಪಾಲಕ್ಕಾಡ್‌ ರೈಲು ವಿಭಾಗದಿಂದ ಮಂಗಳೂರು ಹಾಗೂ ಕರ್ನಾಟಕದ ಕೆಲವು ರೈಲ್ವೆ ನಿಲ್ದಾಣ/ಮಾರ್ಗಗಳನ್ನು ಪ್ರತ್ಯೇಕಿಸಿ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರಿಸಿದ್ದನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಸ್ಪಷ್ಟಪಡಿಸಿದ್ದಾರೆ.

- ಹೀಗಂತ ಕೇರಳದ ಕಾಂಗ್ರೆಸ್‌ ಸಂಸದ ಕೋಡಿಕುನ್ನಿಲ್ ಸುರೇಶ್ ಶುಕ್ರವಾರ ತಿಳಿಸಿದ್ದಾರೆ.

ಪತ್ರಕರ್ತರ ಜತೆ ಮಾತನಾಡಿದ ಸುರೇಶ್‌, ‘ಪಾಲಕ್ಕಾಡ್ ರೈಲ್ವೆ ವಿಭಾಗದ ಪ್ರಸ್ತಾವಿತ ಪುನರ್ವಿಂಗಡಣೆಯ ಕುರಿತು ಇಂದು ಬೆಳಿಗ್ಗೆ ನಾನು ರೈಲ್ವೆ ಸಚಿವರೊಂದಿಗೆ ಮಾತನಾಡಿದೆ. ವಿಲೀನವನ್ನು ಪುನರ್ವಿಮರ್ಶಿಸಲು ಮತ್ತು ಮರುಪರಿಶೀಲಿಸಲು ಕೋರಿದೆ. ಈ ಬಗ್ಗೆ ಕೇರಳ ಸಂಸದರ ಸಭೆ ಕರೆದು ಮಾತನಾಡಬೇಕು ಎಂದೂ ಕೋರಿದೆ ಆದರೆ ದುರದೃಷ್ಟವಶಾತ್, ರೈಲ್ವೆ ಸಚಿವರು ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಕೋನದಿಂದ ಈ ವಿಲೀನ ಅಗತ್ಯ ಮತ್ತು ಅನಿವಾರ್ಯ ಎಂದು ಉತ್ತರಿಸಿದರು’ ಎಂದರು.

ಕೇರಳಕ್ಕೆ ಅನ್ಯಾಯ:

ಇದೇ ವೇಳೆ, ‘ಕೇರಳ ಸರ್ಕಾರವು ಕೋಚ್ ಕಾರ್ಖಾನೆ ಸ್ಥಾಪಿಸಲು 200 ಎಕರೆ ಭೂಮಿಯನ್ನು ಗುರುತಿಸಿತ್ತು. ಆದರೆ ರೈಲ್ವೆ ಇಲಾಖೆ ಆ ಕೋಚ್ ಕಾರ್ಖಾನೆ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದೆ ಹಾಗೂ ಭರವಸೆಯಿಂದ ಹಿಂದೆ ಸರಿದಿದೆ. ಈಗ, ಯಾವುದೇ ಭರವಸೆಗಳಿಲ್ಲದೆ, ರೈಲ್ವೆ ಸಚಿವಾಲಯವು ಮಂಗಳೂರು ವಿಭಾಗವನ್ನು ಮೈಸೂರು ವಿಭಾಗಕ್ಕೆ ವಿಲೀನಗೊಳಿಸಲು ನಿರ್ಧರಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.==

ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ ನಿಂತ್ರೂ ಮಂಗ್ಳೂರು ಬಿಡಲ್ಲ

ಕೇರಳದಲ್ಲಿ ಎಲ್ಲ ವಿರೋಧ ಪಕ್ಷದವರು ಸಹ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಮಾತನಾಡುವವರು ಮಾತನಾಡಲಿ. ಅಲ್ಲಿ ಎಲ್ಲಾ ಪಕ್ಷದವರು ನನ್ನ ವಿರುದ್ಧ ಬಟ್ಟೆ ಬಿಚ್ಚಿ ನಿಂತ್ಕೊಂಡು ಮಾತನಾಡಿದರೂ ಅಷ್ಟೇ. ಮಂಗಳೂರು ರೈಲ್ವೆ ವಲಯ ಮೈಸೂರಿನ ಕೈತಪ್ಪಲ್ಲ.

ವಿ.ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ