ಸಾರಾಂಶ
ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶಂಕಿತ ಕುಕಿ ಉಗ್ರರಿಂದ ಹತ್ಯೆಯಾದ 6 ಜನರ ಪೈಕಿ ಮೂವರ ಶವ ಪರೀಕ್ಷೆಯ ವರದಿಗಳು ಬಂದಿದ್ದು, ಅದು ಕುಕಿ ಉಗ್ರರ ಭೀಕರತೆಗೆ ಸಾಕ್ಷಿಯಾಗಿದೆ. ಈ ವರದಿ ಪ್ರಕಾರ ಪುಟ್ಟ ಮಗು, ತಾಯಿ, ಅಜ್ಜಿಯ ದೇಹದಲ್ಲಿ ಗುಂಡೇಟಿನಿಂದ ಆಳವಾದ ಗಾಯಗಳು ಉಂಟಾಗಿರುವುದು ದೃಢವಾಗಿದೆ.
ಇಂಫಾಲ: ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶಂಕಿತ ಕುಕಿ ಉಗ್ರರಿಂದ ಹತ್ಯೆಯಾದ 6 ಜನರ ಪೈಕಿ ಮೂವರ ಶವ ಪರೀಕ್ಷೆಯ ವರದಿಗಳು ಬಂದಿದ್ದು, ಅದು ಕುಕಿ ಉಗ್ರರ ಭೀಕರತೆಗೆ ಸಾಕ್ಷಿಯಾಗಿದೆ. ಈ ವರದಿ ಪ್ರಕಾರ ಪುಟ್ಟ ಮಗು, ತಾಯಿ, ಅಜ್ಜಿಯ ದೇಹದಲ್ಲಿ ಗುಂಡೇಟಿನಿಂದ ಆಳವಾದ ಗಾಯಗಳು ಉಂಟಾಗಿರುವುದು ದೃಢವಾಗಿದೆ.
ಜಿರಿಬಾಮ್ ಜಿಲ್ಲೆಯೊಂದರಲ್ಲಿ 3 ವರ್ಷದ ಚಿಂಗ್‌ಖೀಂಗನ್ಬಾ ಸಿಂಗ್ ಎನ್ನುವ ಮೂರು ವರ್ಷದ ಮಗು ಹಾಗೂ ಆಕೆಯ ತಾಯಿ ಮತ್ತು ಅಜ್ಜಿಯ ಶವ ಕೊಳೆತ ಸ್ಥಿತಿಯಲ್ಲಿ ಕಳೆದ ವಾರ ಪತ್ತೆಯಾಗಿತ್ತು.ಮೂವರ ಪೈಕಿ ಮೂರು ವರ್ಷದ ಬಾಲಕನ ತಲೆಗೆ ಗುಂಡಿಕ್ಕಲಾಗಿದೆ. ಜೊತೆಗೆ ಆತನ ಬಲಗಣ್ಣು ನಾಪತ್ತೆಯಾಗಿದೆ. ಆಳವಾದ ಗಾಯದಿಂದ ದೇಹದ ಭಾಗಗಳು ಸೀಳಿ ಹೋಗಿದೆ. ಎದೆಯಲ್ಲಿ ಮುರಿತ ಉಂಟಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ ಆ ಮಗುವಿನ ತಾಯಿಯ ಎದೆಯಲ್ಲಿ ಮೂರು ಗುಂಡುಗಳು ಹಾಗೂ ಪೃಷ್ಠದಲ್ಲಿ ಒಂದು ಗುಂಡು ಸಿಕ್ಕಿದೆ. ಮಗುವಿನ ಅಜ್ಜಿಯನ್ನು ಕೂಡ ಕುಕಿಗಳು ಭೀಕರವಾಗಿ ಹತ್ಯೆ ಮಾಡಿದ್ದು, ಅವರ ದೇಹದೊಳಗೆ ಐದು ಗುಂಡು ಹೊಕ್ಕಿದೆ ಎಂದು ಶವ ಪರೀಕ್ಷೆ ವರದಿಯಿಂದ ತಿಳಿದು ಬಂದಿದೆ.ಜಿರಿಬಾಮ್‌ನಲ್ಲಿ ಇತ್ತೀಚೆಗೆ ಪೊಲೀಸ್ ಠಾಣೆ ಮೇಲೆ ಶಂಕಿತ ಕುಕಿ ಉಗ್ರರ ಗುಂಪು ದಾಳಿ ಮಾಡಿತ್ತು. ಈ ವೇಳೆ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ 10 ಉಗ್ರರು ಸಾವನ್ನಪ್ಪಿದ್ದರು. ಜೊತೆಗೆ ಹಿಂಸಾಚಾರದ ನಡುವೆಯೇ ಘಟನಾ ಸ್ಥಳದಿಂದ ಮೈತೇಯಿ ಸಮುದಾಯದ 6 ಜನರನ್ನು ಅಪಹರಿಸಲಾಗಿತ್ತು. ಆ ಪೈಕಿ ಇತ್ತೀಚೆಗೆ ಮೂವರ ವಶ ಸಿಕ್ಕಿದೆ.