ಸಾರಾಂಶ
ಇರಾನ್‌ನ ಬಂದರೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಮಸ್ಕತ್: ಕ್ಷಿಪಣಿ ಇಂಧನ ತಯಾರಿಸಲು ಬಳಸುವ ರಾಸಾಯನಿಕ ಸಂಗ್ರಹಿಸಿದ್ದ ದಕ್ಷಿಣ ಇರಾನ್‌ನ ಬಂದರೊಂದರಲ್ಲಿ ಶನಿವಾರ ಭೀಕರ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಹೇಳಿದೆಯಾದರೂ ಸಾವಿನ ಸಂಖ್ಯೆ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಇರಾನ್‌ನ ದೊಡ್ಡ ಬಂದರು ಶಾಹಿದ್ ರಜಯೀಯಲ್ಲಿ ರಾಸಾಯನಿಕಗಳಿದ್ದ ಕಂಟೇನರ್ ಸಂಗ್ರಹಿಸಿದ್ದ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಒಮಾನ್‌ನಲ್ಲಿ ಇರಾನ್ ಹಾಗೂ ಅಮೆರಿಕವು ಶನಿವಾರ ಅಣ್ವಸ್ತ್ರ ತಯಾರಿಕೆ ವಿಚಾರವಾಗಿ ಮೂರನೇ ಸುತ್ತಿನ ಮಾತುಕತೆ ನಡೆಸಿತ್ತು. ಇದೇ ಹೊತ್ತಿನಲ್ಲಿ ಸ್ಫೋಟ ಸಂಭವಿಸಿದೆ.
ಇಸ್ರೇಲ್ ವಿರುದ್ಧ ಬಳಸುವ ರಾಕೆಟ್‌ಗಳಿಗೆ ಮರುಪೂರಣ ಮಾಡಲು ಚೀನಾದಿಂದ ಇಂಧನವನ್ನು ತರಿಸಿಕೊಳ್ಳಲಾಗಿತ್ತು. ಈ ಇಂಧನ ಸಂಗ್ರಹಾರದಲ್ಲಿಯೇ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಯು ಸುಮಾರು 50 ಕಿ.ಮೀ ದೂರದವರೆಗೆ ಕಾಣಿಸಿಕೊಂಡಿದ್ದು, ಭೂಮಿ ನಡುಗಿದ ಅನುಭವವಾಗಿದೆ.