ಸಾರಾಂಶ
ವಿಶ್ವಾದ್ಯಂತ ಉದ್ಯೋಗ ಕಡಿತ ಪರ್ವ ಶುರುವಾಗಿದ್ದು, ಜಾಗತಿಕ ದೈತ್ಯ ಕಂಪನಿಗಳು ಭಾರಿ ಸಂಖ್ಯೆಯಲ್ಲಿ ಹುದ್ದೆ ಕಡಿತಗೊಳಿಸುತ್ತಿವೆ.
ನವದೆಹಲಿ: ವಿಶ್ವಾದ್ಯಂತ ಉದ್ಯೋಗ ಕಡಿತ ಪರ್ವ ಶುರುವಾಗಿದ್ದು, ಜಾಗತಿಕ ದೈತ್ಯ ಕಂಪನಿಗಳು ಭಾರಿ ಸಂಖ್ಯೆಯಲ್ಲಿ ಹುದ್ದೆ ಕಡಿತಗೊಳಿಸುತ್ತಿವೆ. ಕೃತಕ ಬುದ್ಧಿಮತ್ತೆ ಅಳವಡಿಕೆ, ಜಾಗತಿಕ ಆರ್ಥಿಕ ಸ್ಥಿತ್ಯಂತರ- ಇತರ ಕಾರಣಗಳಿಗಾಗಿ ಈ ಕ್ರಮಕ್ಕೆ ಕಂಪನಿಗಳು ಮುಂದಾಗಿವೆ. ಇದರ ಪರಿಣಾಮ ಇ ಸಾವಿರಾರು ಸಿಬ್ಬಂದಿ ಮನೆ ಕಡೆಗೆ ಮುಖ ಮಾಡುವಂತಾಗಿದೆ.
ಭಾರತದ ಟೆಕ್ ದೈತ್ಯ ಟಿಸಿಎಸ್ ಭಾನುವಾರ ಇದೇ ವರ್ಷ 12,000 ನೌಕರರನ್ನು ಮನೆಗೆ ಕಳಿಸುವುದಾಗಿ ಭಾನುವಾರ ಹೇಳಿದೆ.
ಇದರ ಆಸುಪಾಸಿನಲ್ಲೇ ಇಂಟೆಲ್ ಕಂಪನಿಯು 25,000, ಪ್ಯಾನಸಾನಿಕ್ 10,000, ಮೈಕ್ರೋಸಾಫ್ಟ್ 6500, ಮೆಟಾ 3600, ಅಮೆಜಾನ್ 14000, ಐಬಿಎಂ 8000, ಗೂಗಲ್ 500 ಸಿಬ್ಬಂದಿಯನ್ನು ಕಡಿತಗೊಳಿಸುವ ಘೋಷಣೆ ಮಾಡಿವೆ. ಎಚ್‌ಪಿ 6000, ನಿಸ್ಸಾನ್ 20000, ಸ್ಟಾರ್‌ಬಕ್ಸ್ 1100 ಹುದ್ದೆ ಕಡಿತ ಮಾಡುವುದಾಗಿ ಘೋಷಿಸಿವೆ.
ಇದರ ಜತೆಗೆ ವಾಲ್‌ಮಾರ್ಟ್, ಬಾಷ್‌ನಂತಹ ಕಂಪನಿಗಳು ಸಹ ವೆಚ್ಚ ಕಡಿತ ಕಾರಣಗಳಿಂದಾಗಿ ಸಿಬ್ಬಂದಿ ಸಂಖ್ಯೆಯನ್ನು ಇಳಿಸಲು ನಿರ್ಧರಿಸಿವೆ ಎನ್ನಲಾಗಿದೆ.