ಸಾರಾಂಶ
ಲೋಕಸಭೆಯ 5ನೇ ಹಂತದ ಚುನಾವಣೆ ಮೇ 20 ರಂದು ನಡೆಯಲಿದೆ. ಈ ಹಂತದಲ್ಲಿ 8 ರಾಜ್ಯಗಳ 49 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 695 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನವದೆಹಲಿ: ಲೋಕಸಭೆಯ 5ನೇ ಹಂತದ ಚುನಾವಣೆ ಮೇ 20 ರಂದು ನಡೆಯಲಿದೆ. ಈ ಹಂತದಲ್ಲಿ 8 ರಾಜ್ಯಗಳ 49 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 695 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಶನಿವಾರಕ್ಕೆ ಅಂತ್ಯವಾಗಿದೆ.
ಉತ್ತರ ಪ್ರದೇಶದ 14 ಕ್ಷೇತ್ರಗಳು, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳದ 7, ಬಿಹಾರದ 5, ಒಡಿಶಾದ 5, ಜಾರ್ಖಂಡ್ 3 ಹಾಗೂ ಲಡಾಖ್ ಹಾಗೂ ಜಮ್ಮ ಮತ್ತು ಕಾಶ್ಮೀರದಲ್ಲಿ ತಲಾ ಒಂದು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ರಾಹುಲ್ ಗಾಂಧಿ, ಸ್ಮೃತಿ ಇರಾನಿ, ಲಾಲು ಪ್ರಸಾದ್, ರಾಜ್‌ನಾಥ್ ಸಿಂಗ್, ಓಮರ್ ಅಬ್ದುಲ್ಲಾ, ಪಿಯೂಷ್ ಗೋಯಲ್, ರಾಜೀವ್ ಪ್ರತಾಪ್ ರೂಢಿ, ರೋಹಿಣಿ ಅಚಾರ್ಯ, ಚಿರಾಸ್ ಪಾಸ್ವಾನ್, ಸೇರಿದಂತೆ ಹಲವು ಅಭ್ಯರ್ಥಿಗಳು ಕಣದಲ್ಲಿದ್ದಾರೆ.