ಸಾರಾಂಶ
ಚುನಾವಣಾ ಬಾಂಡ್ ಖರೀದಿ ಯೋಜನೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದ್ದು, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಇಂತಹ ಪ್ರಯತ್ನಗಳು ಅಗತ್ಯ. ದೇಶದಲ್ಲಿ ಜನಸ್ನೇಹಿ ಸರ್ಕಾರ ರಚನೆಯಾದಾಗಲೇ ಬಡತನ, ನಿರುದ್ಯೋಗ, ಹಿಂದುಳಿದಿರುವಿಕೆಯಿಂದ ಹೊರ ಬರಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಜನಪರ ಕೆಲಸ ಮಾಡಿದೆ ಎಂದು ಮಾಯಾವತಿ ತಿಳಿಸಿದ್ದಾರೆ.
ಲಖನೌ: ಚುನಾವಣಾ ಬಾಂಡ್ ಖರೀದಿ ಯೋಜನೆಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದ ಅಧ್ಯಕ್ಷೆ ಮಾಯಾವತಿ ಸೋಮವಾರ ಶ್ಲಾಘಿಸಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಇಂತಹ ನಿರಂತರ ಪ್ರಯತ್ನಗಳು ಅಗತ್ಯ ಎಂದು ಹೇಳಿದರು.
ವಿರೋಧ ಪಕ್ಷಗಳು ತಮ್ಮ ವೈಯಕ್ತಿಕ ಲಾಭ ಮತ್ತು ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತಿವೆ ಎಂದ ಅವರು, ಉತ್ತರ ಪ್ರದೇಶದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಯಾವುದೇ ರೀತಿಯ ಬಂಡವಾಳಶಾಹಿಗಳ ಹಾಗೂ ಶ್ರೀಮಂತರು ನೀಡುವ ಹಣ ಬಳಸದೇ, ಬಡವರ ಹಾಗೂ ಹಿಂದುಳಿದ ವರ್ಗದ ಏಳಳಿಗೆಗಾಗಿ ಶ್ರಮಿಸಿದೆ ಎಂದರು.ದೇಶದಲ್ಲಿ ಜನ ಸ್ನೇಹಿ ಸರ್ಕಾರ ರಚನೆಯಾದಾಗ ಮಾತ್ರ ಹೆಚ್ಚುತ್ತಿರುವ ಬಡತನ, ನಿರುದ್ಯೋಗ ಮತ್ತು ಹಿಂದುಳಿದಿರುವಿಕೆಯಿಂದ ಹೊರ ಬರಲು ಸಾಧ್ಯ ಎಂದು ಮಾಯಾವತಿ ಹೇಳಿದರು.