ಸಾರಾಂಶ
ಇಸ್ರೇಲ್ ಮೇಲೆ ಏಕಾಏಕಿ ದಾಳಿ ನಡೆಸಿ ಕೊಲೆ ಮತ್ತು ಅಪಹರಣದಂತಹ ಕೃತ್ಯ ಎಸಗಿರುವ ಪ್ಯಾಲೇಸ್ತೀನ್‌ನ ಹಮಾಸ್ ಉಗ್ರರ ಕೃತ್ಯಕ್ಕೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮಾತ್ರ ಪ್ಯಾಲೆಸ್ತೀನ್ ಪರ ಹೇಳಿಕೆ ನೀಡಿದ್ದಾರೆ.
- ಪ್ಯಾಲೆಸ್ತೀನಿಗಳ ಹತ್ಯೆ ಆದಾಗ ಜಗತ್ತು ಏಕೆ ಸುಮ್ಮನಿತ್ತು?: ಆಕ್ರೋಶ ಶ್ರೀನಗರ: ಇಸ್ರೇಲ್ ಮೇಲೆ ಏಕಾಏಕಿ ದಾಳಿ ನಡೆಸಿ ಕೊಲೆ ಮತ್ತು ಅಪಹರಣದಂತಹ ಕೃತ್ಯ ಎಸಗಿರುವ ಪ್ಯಾಲೇಸ್ತೀನ್‌ನ ಹಮಾಸ್ ಉಗ್ರರ ಕೃತ್ಯಕ್ಕೆ ಭಾರತ ಸೇರಿ ಪ್ರಪಂಚಾದ್ಯಂತ ಖಂಡನೆ ವ್ಯಕ್ತವಾಗುತ್ತಿದ್ದರೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮಾತ್ರ ಪ್ಯಾಲೆಸ್ತೀನ್ ಪರ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ‘ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಸಂಘರ್ಷದ ಕುರಿತು ಜಗತ್ತಿಗೆ ಅರಿವಾಗಲು ಇಸ್ರೇಲ್ ಜನರ ಸಾವು ಮತ್ತು ವಿನಾಶ ಆಗಬೇಕಾಯಿತು ಎಂಬುದು ದುರದೃಷ್ಟಕರ. ಇಷ್ಟು ವರ್ಷಗಳಿಂದ ಮುಗ್ಧ ಪ್ಯಾಲೆಸ್ತೀನ್‌ರನ್ನು ಕೊಲ್ಲಲಾಯಿತು ಮತ್ತು ಅವರ ಮನೆಗಳನ್ನು ನಾಶ ಮಾಡಲಾಯಿತು. ಆಗ ಮಾತ್ರ ಜಗತ್ತು ಮೌನವಾಗಿತ್ತು. ಆದರೆ ಈಗ ತಮ್ನನ್ನು ಪ್ರಜಾಪ್ರಭುತ್ವವಾದಿಗಳು ಎನ್ನುವರು ಪ್ಯಾಲೇಸ್ತಿನ್ ವಿರುದ್ಧ ಆಕ್ರೋಶಗೊಂಡಿದ್ದಾರೆ’ ಎಂದು ಟೀಕಿಸಿದ್ದಾರೆ. ಇನ್ನೊಂದು ಟ್ವೀಟ್‌ನಲ್ಲಿ ಅವರು ‘ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ರಕ್ತಪಾತ ಕೊನೆಗೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಶಾಂತಿ ನೆಲೆಸಲಿ’ ಎಂದು ಬರೆದಿದ್ದಾರೆ.