ಸಾರಾಂಶ
ವಿಶ್ವದ ಇತರ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಅಸ್ತ್ರ ಪ್ರಯೋಗಿಸಿ ಬೆದರಿಕೆ ಹಾಕುತ್ತಿರುವುದನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಖಂಡಿಸಿದ್ದು, ‘ ಶೀತಲ ಸಮರ ಮನಸ್ಥಿತಿ ವಿರುದ್ಧ ಒಗ್ಗಟ್ಟಾಗಿರಿ’ ಎಂದು ಟಿಯಾನ್‌ಜಿನ್‌ನಲ್ಲಿ ನಡೆದ ಶಾಂಘೈ ಶೃಂಗಸಭೆಯಲ್ಲಿ ಕರೆ
ಬೀಜಿಂಗ್: ವಿಶ್ವದ ಇತರ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಅಸ್ತ್ರ ಪ್ರಯೋಗಿಸಿ ಬೆದರಿಕೆ ಹಾಕುತ್ತಿರುವುದನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಖಂಡಿಸಿದ್ದು, ‘ ಶೀತಲ ಸಮರ ಮನಸ್ಥಿತಿ ವಿರುದ್ಧ ಒಗ್ಗಟ್ಟಾಗಿರಿ’ ಎಂದು ಟಿಯಾನ್‌ಜಿನ್‌ನಲ್ಲಿ ನಡೆದ ಶಾಂಘೈ ಶೃಂಗಸಭೆಯಲ್ಲಿ ಕರೆ ನೀಡಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಭಾಗಿಯಾಗಿದ್ದ ಎಸ್‌ಸಿಒ ಶೃಂಗಸಭೆಯಲ್ಲಿ ಕ್ಸಿ ಅಮೆರಿಕವನ್ನು ಒಗ್ಗಟ್ಟಿನಿಂದ ನ್ಯಾಯುತವಾಗಿ ಎದುರಿಸಬೇಕು ಎಂದು ಕರೆ ನೀಡಿದ್ದಾರೆ. ಶೃಂಗಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ‘ನಾವು ಪಾರದರ್ಶಕತೆ ಮತ್ತು ನ್ಯಾಯವನ್ನು ಉತ್ತೇಜಿಸಬೇಕು. ಶೀತಲ ಸಮರದ ಮನಸ್ಥಿತಿ, ಬೆದರಿಕೆ ನಡವಳಿಕೆಯನ್ನು ವಿರೋಧಿಸಲು ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದು ಕರೆ ನೀಡಿದ್ದಾರೆ. ಜೊತೆಗೆ, ‘ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಪಂಚವು ಪ್ರಕ್ಷುಬದ್ಧತೆ, ಪರಿವರ್ತನೆಗೆ ಒಳಗಾಗುತ್ತಿರುವಾಗ ನಾವು ಶಾಂಘೈ ಮನೋಭಾವ ಅನುಸರಿಸುವುದನ್ನು ಮುಂದುವರೆಸಿಬೇಕು. ಮತ್ತಷ್ಟು ಉತ್ತಮವಾಗಿ ನಿರ್ವಹಿಸಬೇಕು’ ಎಂದಿದ್ದಾರೆ.
ಭಾರತ - ರಷ್ಯಾ ತೈಲ ಸಂಬಂಧ ಅಮೆರಿಕದ ಕಣ್ಣು ಕುಕ್ಕಿ ತೆರಿಗೆ ಅಸ್ತ್ರ ಪ್ರಯೋಗಿಸಿತ್ತು. ಇದೇ ವಿಚಾರವನ್ನು ಕ್ಸಿ ಟಿಯಾಂಜಿನ್ ಶೃಂಗಸಭೆಯಲ್ಲಿ ಬೆದರಿಕೆ ಎಂದು ಕರೆದಿದ್ದಾರೆ. ಮಾತ್ರವಲ್ಲದೇ ಮೋದಿ, ಪುಟಿನ್, ಕ್ಸಿ ಒಟ್ಟಿಗೆ ಕಾಣಿಸಿಕೊಳ್ಳುವುದರ ಮೂಲಕ ಮೂರು ಬಲಾಢ್ಯ ರಾಷ್ಟ್ರಗಳು ಒಗ್ಗಟ್ಟಾಗಿವೆ ಎನ್ನುವ ಸಂದೇಶವನ್ನು ನೀಡಿ ಅಮೆರಿಕ ಟ್ರಂಪ್‌ಗೆ ಎಚ್ಚರಿಕೆಯನ್ನು ಈ ನಾಯಕರು ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.