ನೌಕಾಪಡೆ ಹಡಗು ಬ್ರೂಕ್ಲಿನ್ ಸೇತುವೆಗೆ ಡಿಕ್ಕಿ : 2 ಸಾವು

| N/A | Published : May 19 2025, 12:28 AM IST / Updated: May 19 2025, 04:20 AM IST

ನೌಕಾಪಡೆ ಹಡಗು ಬ್ರೂಕ್ಲಿನ್ ಸೇತುವೆಗೆ ಡಿಕ್ಕಿ : 2 ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಈಸ್ಟ್‌ ನದಿಯಲ್ಲಿ ಸಾಗುತ್ತಿದ್ದ ಮೆಕ್ಸಿಕೋದ ನೌಕಾಪಡೆಯ ಹಡಗೊಂದು 142 ವರ್ಷ ಹಳೆ  ಬ್ರೂಕ್ಲಿನ್ ಸೇತುವೆಯ ಅಡಿ ಸಾಗುವ ವೇಳೆ ಅದಕ್ಕೆ ಡಿಕ್ಕಿ ಹೊಡೆದ ಘಟನೆ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ 22 ಜನರು ಗಾಯಗೊಂಡಿದ್ದು, ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ.

 ನ್ಯೂಯಾರ್ಕ್‌: ಇಲ್ಲಿನ ಈಸ್ಟ್‌ ನದಿಯಲ್ಲಿ ಸಾಗುತ್ತಿದ್ದ ಮೆಕ್ಸಿಕೋದ ನೌಕಾಪಡೆಯ ಹಡಗೊಂದು 142 ವರ್ಷ ಹಳೆದ ಬ್ರೂಕ್ಲಿನ್ ಸೇತುವೆಯ ಅಡಿ ಸಾಗುವ ವೇಳೆ ಅದಕ್ಕೆ ಡಿಕ್ಕಿ ಹೊಡೆದ ಘಟನೆ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ 22 ಜನರು ಗಾಯಗೊಂಡಿದ್ದು, ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ.

ಮ್ಯಾನ್‌ಹ್ಯಾಟನ್ ಪಿಯರ್‌ನಿಂದ ಸಮುದ್ರದ ಕಡೆ ಹೊರಟಿದ್ದ ಹಡಗು ಸೇತುವೆಯತ್ತ ಹೋಗಿದ್ದೇಕೆಂದು ತಿಳಿದುಬಂದಿಲ್ಲ. ಈ ಬಗ್ಗೆ ಮಾತನಾಡಿರುವ ನ್ಯೂಯಾರ್ಕ್ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಾಚರಣೆ ಮುಖ್ಯಸ್ಥ ವಿಲ್ಸನ್‌ ಅರಾಂಬೋಲ್ಸ್‌, ‘ಯಾಂತ್ರಿಕ ಸಮಸ್ಯೆಯಿಂದಾಗಿ ಹಡಗಿನಲ್ಲಿ ವಿದ್ಯುತ್‌ ವ್ಯತ್ಯಯವಾಗಿದ್ದು, ಪೈಲೆಟ್‌ ನಿಯಂತ್ರಣ ಕಳೆಕೊಂಡ ಕಾರಣ ಅವಘಡ ಸಂಭವಿಸಿದೆ’ ಎಂದು ತಿಳಿಸಿದ್ದಾರೆ.

ಆಗಿದ್ದೇನು?:

‘ಕುವಾಹ್ಟೆಮೊಕ್’ ಹೆಸರಿನ 297 ಅಡಿ ಉದ್ದ ಮತ್ತು 40 ಅಡಿ ಅಗಲದ ಮೆಕ್ಸಿಕೋ ನೌಕಾಪಡೆಯ ಅಲಂಕೃತ ಹಡಗು 227 ಜನರನ್ನು ಹೊತ್ತು ಮ್ಯಾನ್‌ಹಟ್ಟನ್‌ನಿಂದ ಹೊರಟಿತ್ತು. ಅದು 1883ರಲ್ಲಿ ನಿರ್ಮಾಣವಾಗಿದ್ದ ಬ್ರೂಕ್ಲಿನ್ ಸೇತುವೆಯ ಕೆಳಗಿಂದ ಹಾದು ಹೋಗುತ್ತಿದ್ದಾಗ, ಅದರಲ್ಲಿದ್ದ 158 ಅಡಿ ಎತ್ತರದ 3 ಸ್ತಂಭಗಳು ಸೇತುವೆಗೆ ತಾಗಿ ಮುರಿದು ಹೋಗಿವೆ. ಆ ಸೇತುವೆಯ ಅಡಿಯಿಂದ 135 ಅಡಿ ಎತ್ತರದ ಹಡಗುಗಳಷ್ಟೇ ಹೋಗಬಹುದಾಗಿತ್ತು. ಆದರೆ ಈ ಹಡಗಿನ ಕಂಬಗಳು ಅದಕ್ಕಿಂತ ಉದ್ದವಿದ್ದ ಕಾರಣ ಮುರಿದಿವೆ.

ಘಟನೆ ನಡೆದಾಗ, ಸೂರ್ಯಾಸ್ತ ವೀಕ್ಷಿಸಲು ನೆರೆದಿದ್ದ ಹಲವರು ಇದರ ದೃಶ್ಯವನ್ನು ಸೆರೆಹಿಡಿದಿದ್ದು, ‘ಸಿನಿಮಾ ನೋಡಿದಂತಾಯಿತು’ ಎಂದು ಅಚ್ಚರಿ ಮತ್ತು ಆಘಾತ ವ್ಯಕ್ತಪಡಿಸಿದ್ದಾರೆ. ಕೆಲ ಹೊತ್ತಿನ ತನಕ ಸೇತುವೆಯ ಮೇಲೆ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಬಳಿಕ ಮತ್ತೆ ಆರಂಭಿಸಲಾಗಿದೆ.

Read more Articles on