75ರ ವೃದ್ಧ ಪ್ರಧಾನಿಗೆ 3ನೇ ಅವಧಿ ಬಯಕೆ: ಲಾಲು ಪುತ್ರಿ

| Published : May 03 2024, 01:03 AM IST / Updated: May 03 2024, 05:47 AM IST

ಸಾರಾಂಶ

ಪಾಟಲೀಪುತ್ರದ ಆರ್‌ಜೆಡಿ ಅಭ್ಯರ್ಥಿ ಮಿಸಾ ಭಾರತಿ ಪ್ರಧಾನಿ ಮೋದಿಯನ್ನು ಅಗ್ನಿವೀರ ಯೋಜನೆ ನೆಪ ಇಟ್ಟುಕೊಂಡು ಟೀಕೆ ಮಾಡಿದ್ದಾರೆ.

ಪಟನಾ: ದೇಶ ಕಾಯಲು ಹುಮ್ಮಸ್ಸಿನಿಂದ ಸೇರುವ ಸೈನಿಕರಿಗೆ ಅಗ್ನಿವೀರ ಯೋಜನೆಯನ್ನು ಜಾರಿಗೆ ತಂದು ಕೇವಲ 22ನೇ ವಯಸ್ಸಿಗೆ ನಿವೃತ್ತಿ ಮಾಡಿರುವ ಎನ್‌ಡಿಎ ಸರ್ಕಾರ ತಮ್ಮ 75 ವರ್ಷದ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತ್ರ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಬಯಸುತ್ತಿದೆ ಎಂದು ಲಾಲು ಪ್ರಸಾದ್‌ ಪುತ್ರಿ ಮಿಸಾ ಭಾರತಿ ಆರೋಪಿಸಿದ್ದಾರೆ.

ಮೋದಿ ವಯೋಮಿತಿ ಕುರಿತು ಮಾತನಾಡಿರುವ ಮಿಸಾ ಈ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ತಮ್ಮ ತಂದೆ ಮತ್ತು ಆರ್‌ಜೆಡಿ ಮುಖ್ಯಸ್ಥ ಕೂಡಾ ವೃದ್ಧರು.  ಲಾಲುಗಿಂತ ಮೋದಿ ಚಿಕ್ಕವರು ಎಂಬುದನ್ನು ಅವರು ಮರೆತಂತಿದೆ ಎಂದಿದೆ.