ಸಾರಾಂಶ
‘2030ರ ವೇಳೆಗೆ 500 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಗುರಿಯನ್ನು ಸಾಧಿಸಲು ವಿವಿಧ ಮೂಲಗಳಿಂದ ಹೂಡಿಕೆಯನ್ನು ಆಕರ್ಷಿಸುವುದು ಅಗತ್ಯ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಮುಂಬೈ: ‘2030ರ ವೇಳೆಗೆ 500 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಗುರಿಯನ್ನು ಸಾಧಿಸಲು ವಿವಿಧ ಮೂಲಗಳಿಂದ ಹೂಡಿಕೆಯನ್ನು ಆಕರ್ಷಿಸುವುದು ಅಗತ್ಯ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಆಯೋಜಿಸಿದ್ದ, ನವೀಕರಿಸಬಹುದಾದ ಶಕ್ತಿಗಾಗಿ ಹೂಡಿಕೆ ಕಾರ್ಯಾಗಾರದಲ್ಲಿ ಮಾತನಾಡಿದ ಜೋಶಿ, ‘ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಸಾಕಷ್ಟು ನಿಧಿ ಹರಿದುಬರುವಂತೆ ಮಾಡುವತ್ತ ಆರ್ಥಿಕ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಶ್ರಮಿಸಬೇಕು’ ಎಂದು ಕರೆ ನೀಡಿದರು.‘ದೇಶ ಇಂದು 222 ಜಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದಿಸುತ್ತಿದೆ. ಜಗತ್ತಿನ 3ನೇ ದೊಡ್ಡ ಆರ್ಥಿಕತೆಯಾಗುವ ಗುರಿ ಹೊಂದಿರುವ ಭಾರತದಲ್ಲಿ ಇಂಧನದ ಬೇಡಿಕೆಯೂ ದ್ವಿಗುಣಗೊಳ್ಳಲಿದೆ. ಇದನ್ನು ಪೂರೈಸಲು ಥರ್ಮಲ್ ಶಕ್ತಿಯಷ್ಟೇ ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸಬೇಕು. 2070ರ ವೇಳೆಗೆ ಶೂನ್ಯ ಕಾರ್ಬನ್ ಉತ್ಪಾದನೆಯನ್ನು ಸಾಧ್ಯವಾಗಿಸಬೇಕು. ಮುಂಬರುವ ದಿನಗಳಲ್ಲಿ ಅಧಿಕ ಕಾರ್ಬನ್ ಹೊರಸೂಸುವ ಕಾರ್ಖಾನೆಗಳ ರಫ್ತಿನಲ್ಲಿ ಇಳಿಕೆಯಾಗಲಿದೆ’ ಎಂದು ಜೋಶಿ ತಿಳಿಸಿದರು.
ಇದೇ ವೇಳೆ, ಸೌರಫಲಕ ಅಳವಡಿಕೆಗೆ ಹಣಕಾಸು ಪ್ರಕ್ರಿಯೆಯನ್ನು ಸರಳಗೊಳಿಸಿ ಎಂದು ಬ್ಯಾಂಕುಗಳಿಗೆ ಆಗ್ರಹಿಸಿದ್ದಾರೆ.