ಸಾರಾಂಶ
ಕಾಂಗ್ರೆಸ್ ನಾಯಕ ಹರಕ್‌ಸಿಂಗ್ ರಾವತ್ ಅವರ ಸೊಸೆ, ಖ್ಯಾತ ಮಾಡೆಲ್ ಅನುಕೃತಿ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದಾರೆ.
ಡೆಹ್ರಾಡೂನ್: ಅರಣ್ಯ ಹಗರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದ ಬೆನ್ನಲ್ಲೇ, ಛತ್ತೀಸ್‌ಗಢದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಹರಕ್‌ಸಿಂಗ್ ರಾವತ್ ಅವರ ಸೊಸೆ, ಖ್ಯಾತ ಮಾಡೆಲ್ ಅನುಕೃತಿ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ್ದಾರೆ. ಅಲ್ಲದೇ ಶೀಘ್ರವೇ ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ. ಅರಣ್ಯ ಹಗರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಸಂಬಂಧ ಇ.ಡಿ. ಅಧಿಕಾರಿಗಳು ಕಳೆದ ತಿಂಗಳು ರಾವತ್ ಮತ್ತು ಅನುಕೃತಿ ಮನೆ ಮೇಲೆ ದಾಳಿ ನಡೆಸಿದ್ದರು. ಅಲ್ಲದೆ ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಸಮನ್ಸ್ ನೀಡಿತ್ತು.