ಸಾರಾಂಶ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ದೆಹಲಿಯಲ್ಲಿ ‘ಭಾರತ್ ಪೋಲ್’ ಪೋರ್ಟಲ್ ಗೆ ಚಾಲನೆ ನೀಡದರು. ಸಿಬಿಐ ಈ ಹೋಸ ವೆಬ್‌ಸೈಟ್ ಆರಂಭಿಸಿದ್ದು ಭಾರತದಾದ್ಯಂತ ಇರುವ ತನಿಖಾ ಸಂಸ್ಥೆಗಳಿಗೆ ವೇಗವಾದ ಅಂತರಾಷ್ಟ್ರೀಯ ಪೊಲೀಸ್ ಸಹಾಯಕ್ಕಾಗಿ ನೈಜ-ಸಮಯದ ಮಾಹಿತಿ ಹಂಚಿಕೊಳ್ಳಲು ಸಹಾಯ ಮಾಡುತ್ತದೆ.
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ದೆಹಲಿಯಲ್ಲಿ ‘ಭಾರತ್ ಪೋಲ್’ ಪೋರ್ಟಲ್ ಗೆ ಚಾಲನೆ ನೀಡದರು. ಸಿಬಿಐ ಈ ಹೋಸ ವೆಬ್‌ಸೈಟ್ ಆರಂಭಿಸಿದ್ದು ಭಾರತದಾದ್ಯಂತ ಇರುವ ತನಿಖಾ ಸಂಸ್ಥೆಗಳಿಗೆ ವೇಗವಾದ ಅಂತರಾಷ್ಟ್ರೀಯ ಪೊಲೀಸ್ ಸಹಾಯಕ್ಕಾಗಿ ನೈಜ-ಸಮಯದ ಮಾಹಿತಿ ಹಂಚಿಕೊಳ್ಳಲು ಸಹಾಯ ಮಾಡುತ್ತದೆ.ಈ ವೇಳೆ ಅವರು ಮಾತನಾಡಿ, ‘ವಿದೇಶದಲ್ಲಿ ಅವಿತಿರುವ ಕೇಡಿಗಳನ್ನು ಭಾರತಕ್ಕೆ ತರಲು ಇದರಿಂದ ನೈಜ ಸಮಯದಲ್ಲಿ ಅವಕಾಶ ಸಿಗಲಿದೆ’ ಎಂದರು.
ಭಾರತಪೋಲ್ ಎಂದರೇನು?ಭಾರತದ ಯಾವುದೇ ರಾಜ್ಯದಲ್ಲಿರುವ ತನಿಖಾ ಏಜೆನ್ಸಿಗಳು ನೈಜ ಸಮಯದಲ್ಲಿ ಆರೋಪಿಗಳ ಬಗ್ಗೆ ಅಥವಾ ಅಪರಾಧಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ಭಾರತ್ ಪೋಲ್ ಪೋರ್ಟಲ್ ಸಹಾಯ ಮಾಡಲಿದೆ. ಉದಾಹರಣೆಗೆ: ಚೆನ್ನೈ ಪೊಲೀಸರಿಗೆ ಬೇಕಾದ ಒಬ್ಬ ಆರೋಪಿ ಅಮೆರಿಕದಲ್ಲಿದ್ದರೆ ಚೆನ್ನೈ ಪೊಲೀಸರು ಆತ ತಮಗೆ ಬೇಕಾಗಿದ್ದಾನೆ ಎಂಬ ಮಾಹಿತಿಯನ್ನು ಭಾರತ್ ಪೋಲ್ ಪೋರ್ಟಲ್‌ಗೆ ಹಾಕುತ್ತಾರೆ.ಕೂಡಲೇ ಈ ಪೋರ್ಟಲ್ ನಿರ್ವಹಿಸುವ ಸಿಬಿಐ, ಆತ ಭಾರತಕ್ಕೆ ಬೇಕಾಗಿದ್ದಾನೆ ಎಂಬ ಮಾಹಿತಿಯನ್ನು ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಯಾದ ಇಂಟರ್‌ಪೋಲ್‌ಗೆ ರವಾನಿಸುತ್ತಾರೆ ಹಾಗೂ ಆತನ ಬಂಧನಕ್ಕೆ ಸಹಕಾರ ಕೋರುತ್ತಾರೆ. ಬಳಿಕ ಇಂಟರ್‌ಪೋಲ್, ಆ ಕೇಡಿಯ ಬಂಧನಕ್ಕೆ ನೋಟಿಸ್ ಹೊರಡಿಸುತ್ತದೆ.
ಈವರೆಗೂ ಬೇಕಿರುವ ಆರೋಪಿಗಳ ಬಗ್ಗೆ ಮಾಹಿತಿಯನ್ನು ಆಯಾ ರಾಜ್ಯಗಳ ಪೊಲೀಸರು ಪತ್ರ ಮುಖೇನ ಸಿಬಿಐಗೆ ತಿಳಿಸುತ್ತಿದ್ದರು. ಇದು ವಿಳಂಬ ಪ್ರಕ್ರಿಯೆ ಆಗಿತ್ತು.