ಬಿಜೆಪಿ ಎಸ್ಸಿ, ಎಸ್ಟಿ, ಒಬಿಸಿ ಮೀಸಲು ತೆಗೆಯಲ್ಲ: ಅಮಿತ್ ಶಾ

| Published : Apr 29 2024, 01:32 AM IST / Updated: Apr 29 2024, 05:10 AM IST

Amit shah
ಬಿಜೆಪಿ ಎಸ್ಸಿ, ಎಸ್ಟಿ, ಒಬಿಸಿ ಮೀಸಲು ತೆಗೆಯಲ್ಲ: ಅಮಿತ್ ಶಾ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಜಾತಿ ಮೀಸಲಾತಿ ಜಟಾಪಟಿ ಜೋರಾಗಿದೆ. ಈ ವಿಚಾರದಲ್ಲಿ ನಾಯಕರ ವಾಕ್ಸಮರ ಭಾನುವಾರವೂ ಮುಂದುವರೆದಿದೆ.

ಕಾಸ್ಗಂಜ್ : ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಜಾತಿ ಮೀಸಲಾತಿ ಜಟಾಪಟಿ ಜೋರಾಗಿದೆ. ಈ ವಿಚಾರದಲ್ಲಿ ನಾಯಕರ ವಾಕ್ಸಮರ ಭಾನುವಾರವೂ ಮುಂದುವರೆದಿದೆ. 

‘ ಬಿಜೆಪಿ ಎಸ್‌ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗದ ಮೀಸಲಾತಿ ತೆಗೆದು ಹಾಕುವುದಿಲ್ಲ. ಅಲ್ಲದೇ ಈ ರೀತಿ ಮಾಡುವವರಿಗೆ ಅವಕಾಶವನ್ನು ನೀಡುವುದಿಲ್ಲ. ಇದು ಮೋದಿ ಗ್ಯಾರಂಟಿ ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿ ತೆಗೆದು ಹಾಕುತ್ತದೆ ಎನ್ನುವ ವಿಪಕ್ಷಗಳ ಆರೋಪಕ್ಕೂ ಶಾ ತಿರುಗೇಟು ಕೊಟ್ಟಿದ್ದಾರೆ. ‘ ಬಿಜೆಪಿ 400 ಸೀಟ್ ಗೆದ್ದರೆ ಮೀಸಲಾತಿಯನ್ನು ತೆಗೆದುಹಾಕುತ್ತದೆ ಎಂದು ರಾಹುಲ್ ಗಾಂಧಿಯವರು ಹೇಳುತ್ತಾರೆ . ಆದರೆ ನಾವು ಎರಡು ಅವಧಿಗೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದೆವು. ಅಂತಹ ಯಾವುದೇ ಕೆಲಸವನ್ನು ಮಾಡಿಲ್ಲ, ಆ ರೀತಿ ಮಾಡುವುದಕ್ಕೆ ಅವಕಾಶವೂ ನೀಡಲ್ಲ ’ ಎಂದು ತಿರುಗೇಟು ಕೊಟ್ಟಿದ್ದಾರೆ.