ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ಸರ್ಕಾರ ವಿವಿಧ ದೇಶಗಳಿಂದ ಕಚ್ಚಾತೈಲ ಖರೀದಿ ಪ್ರಮಾಣ ಹೆಚ್ಚಳ ಮಾಡಿದೆ. ಅದರ ಬೆನ್ನಲ್ಲೇ ಚೀನಾದತ್ತ ಹೊರಟಿದ್ದ ರಷ್ಯಾದ ತೈಲ ಹಡಗೊಂದು ದಿಢೀರನೆ ತನ್ನ ಮಾರ್ಗ ಬದಲಾಯಿಸಿ ಭಾರತದತ್ತ ಹೊರಟಿದೆ. ಈ ಹಡಗು ಮಾ.21ರಂದು ನವ ಮಂಗಳೂರು ಬಂದರಿಗೆ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

ಭಾರತದಿಂದ ಭಾರೀ ಪ್ರಮಾಣದ ತೈಲ ಖರೀದಿನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ಸರ್ಕಾರ ವಿವಿಧ ದೇಶಗಳಿಂದ ಕಚ್ಚಾತೈಲ ಖರೀದಿ ಪ್ರಮಾಣ ಹೆಚ್ಚಳ ಮಾಡಿದೆ. ಅದರ ಬೆನ್ನಲ್ಲೇ ಚೀನಾದತ್ತ ಹೊರಟಿದ್ದ ರಷ್ಯಾದ ತೈಲ ಹಡಗೊಂದು ದಿಢೀರನೆ ತನ್ನ ಮಾರ್ಗ ಬದಲಾಯಿಸಿ ಭಾರತದತ್ತ ಹೊರಟಿದೆ. ಈ ಹಡಗು ಮಾ.21ರಂದು ನವ ಮಂಗಳೂರು ಬಂದರಿಗೆ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಜನವರಿ ತಿಂಗಳಲ್ಲಿ ಬಾಲ್ಟಿಕ್‌ ಸಮುದ್ರ ತೀರದಿಂದ ತೈಲ ತುಂಬಿಕೊಂಡಿದ್ದ ಆಕ್ವಾ ಟೈಟನ್‌ ಎಂಬ ಹಡಗು ಪ್ರಯಾಣ ಆರಂಭಿಸಿತ್ತು. ಮೂಲ ದಾಖಲೆಗಳ ಪ್ರಕಾರ ಅದು ಚೀನಾದತ್ತ ಹೊರಟಿತ್ತು. ಆದರೆ ಮಧ್ಯಪ್ರಾಚ್ಯ ಬಿಕ್ಕಟ್ಟು ತೀವ್ರವಾದ ಬಳಿಕ ರಷ್ಯಾದಿಂದ ತೈಲ ಖರೀದಿಗೆ ಭಾರತಕ್ಕೆ ಅಮೆರಿಕ ಅವಕಾಶ ಮಾಡಿಕೊಟ್ಟಿತ್ತು. ಅದರ ಬೆನ್ನಲ್ಲೇ ರಷ್ಯಾದ ಭಾರತ ಡೀಲ್‌ ಮಾಡಿಕೊಂಡಿದ್ದು ಅದರ ಪರಿಣಾಮ ಚೀನಾದ ಕಡೆ ಹೊರಟಿದ್ದ ಹಡಗು ತನ್ನ ಪಥ ಬದಲಿಸಿ ಭಾರತದತ್ತ ಹೊರಟಿದೆ ಎಂದು ಮೂಲಗಳು ತಿಳಿಸಿವೆ.

==

2.11 ಕೋಟಿ ಸಿಲಿಂಡರ್‌ ತುಂಬಿಸಬಲ್ಲ

ಎಲ್‌ಪಿಜಿ ಇನ್ನೂ ಹೋರ್ಮುಜ್‌ನಲ್ಲಿ

ಎಲ್‌ಪಿಜಿ ಹೊತ್ತ 6 ನೌಕೆ ಬರೋದು ಬಾಕಿ

ಇವುಗಳಲ್ಲಿದೆ 4 ದಿನಕ್ಕಾಗುವಷ್ಟು ಗ್ಯಾಸ್‌

ನವದೆಹಲಿ: ಎಲ್‌ಪಿಜಿ ಹೊತ್ತ 2 ಸೇರಿ 4 ಭಾರತೀಯ ನೌಕೆಗಳು ಗಲ್ಫ್‌ನಿಂದ ತವರಿಗೆ ಮರಳಿದ್ದರೂ ಇನ್ನೂ 22 ಹಡಗುಗಳು ಹೋರ್ಮುಜ್‌ ಜಲಸಂಧಿಯ ಬಳಿಯೇ ಇವೆ. ಆ ಪೈಕಿ 6 ನೌಕೆಗಳಲ್ಲಿ 3 ಲಕ್ಷ ಟನ್ ಎಲ್‌ಪಿಜಿ ಇದ್ದು, ಇದು 3-4 ದಿನ ಭಾರತದಲ್ಲಿ ಪೂರೈಕೆಯಾಗುವ ಎಲ್ಲಾ ಸಿಲಿಂಡರ್‌ಗಳನ್ನು ತಲುಪಿಸುವಷ್ಟಾಗಿದೆ.ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಈ ಬಗ್ಗೆ ಮಾಹಿತಿ ನೀಡಿದ್ದು, ‘ಸದ್ಯ ಭಾರತದ 6 ಎಲ್‌ಪಿಜಿ, 1 ಎಲ್‌ಎನ್‌ಜಿ, 4 ಕಚ್ಚಾತೈಲ, 1 ರಾಸಾಯನಿಕ, 3 ಕಂಟೇಯ್ನರ್‌, 2 ಸರಕು ಸಾಗಣೆ ಹಡಗುಗಳು ಹೋರ್ಮುಜ್‌ ದಾಟುವುದು ಬಾಕಿ ಇದೆ. ಜತೆಗೆ ಒಂದು ಹೂಳೆತ್ತುವ, ಇನ್ನೊಂದು ಖಾಲಿ ಮತ್ತು 3 ನಿಯಮಿತ ನಿರ್ವಹಣೆಗೆ ಒಳಪಟ್ಟವುಗಳಾಗಿವೆ. ಇವುಗಳ ಮೇಲೆ ಹತ್ತಿರದಿಂದ ನಿಗಾ ವಹಿಸಲಾಗುತ್ತಿದೆ ಹಾಗೂ ಅಗತ್ಯ ಬೆಂಬಲ ನೀಡಲಾಗುತ್ತಿದೆ’ ಎಂದಿದ್ದಾರೆ. ಅಂತೆಯೇ, ಮುಂಬೈನ ಜವಾಹರಲಾಲ್‌ ನೆಹರು ಬಂದರಿನಿಂದ ಗಲ್ಫ್‌ ಕಡೆ ಹೊರಟಿದ್ದ ಹಡಗುಗಳ ಸಂಖ್ಯೆಯನ್ನು 2,000ದಿಂದ 1,000ಕ್ಕೆ ಇಳಿಸಲಾಗಿದೆ. ಕೆಲವನ್ನು ಒಮಾನ್‌, ಯುಎಇಗೆ ರವಾನಿಸಿದರೆ, ಕೆಲವು ಸ್ಥಳೀಯ ಮಾರುಕಟ್ಟೆಗೆ ಮರಳಿವೆ ಎಂದು ತಿಳಿಸಿದರು.

===ಯಾವುದು ಎಷ್ಟಿದೆ?

ಕಚ್ಚಾತೈಲ: 16.7 ಲಕ್ಷ ಟನ್‌ಎಲ್‌ಪಿಜಿ: 3.2 ಲಕ್ಷ ಟನ್‌

ಎಲ್‌ಎನ್‌ಜಿ: 2 ಲಕ್ಷ ಟನ್‌

==

80,886 ಮೆಟ್ರಿಕ್‌ ಟನ್‌ ತೈಲ

ಹೊತ್ತ ನೌಕೆ ಲಾಡ್ಕಿ ಭಾರತಕ್ಕೆ

ಕ್ಷಿಪಣಿ ದಾಳಿಯಿಂದ ಬಚಾವ್‌ ಆಗಿದ್ದ ಹಡಗು

ಅಹಮದಾಬಾದ್‌: ಇತ್ತೀಚೆಗೆ ಯುಎಇನ ಫುಜೈರಾ ಬಂದರಿನ ಮೇಲೆ ನಡೆದ ಕ್ಷಿಪಣಿ ದಾಳಿಯಿಂದ ಬಚಾವ್‌ ಆಗಿದ್ದ ಜಗ್‌ ಲಾಡ್ಕಿ ಹಡಗು ಬುಧವಾರ ಸುರಕ್ಷಿತವಾಗಿ ಗುಜರಾತ್‌ನ ಮುಂದ್ರಾ ಬಂದರಿಗೆ ಆಗಮಿಸಿದೆ.

80886 ಟನ್‌ ತೈಲ ತುಂಬಿಸುವ ವೇಳೆ ಇತ್ತೀಚೆಗೆ ಯುಎಇ ಬಂದರಿನ ಮೇಲೆ ದಾಳಿ ನಡೆದಿತ್ತು. ಆದರೆ ಈ ವೇಳೆ ಪಾರಾಗಿದ್ದ ಹಡಗು, ಬಳಿಕ ಭಾರತೀಯ ಯುದ್ಧ ನೌಕೆಗಳ ಕಣ್ಗಾವಲಿನಲ್ಲಿ ಭಾರತದತ್ತ ಪ್ರಯಾಣ ಬೆಳೆಸಿತ್ತು. ಮಂಗಳವಾರ ಇದೇ ಬಂದರಿಗೆ ಅನಿಲ ತುಂಬಿದ್ದ ಶಿವಾಲಿಕ್‌ ಹಡಗು ಆಗಮಿಸಿತ್ತು. ಇದರೊಂದಿಗೆ ಯುದ್ಧ ವಲಯವನ್ನು ಸುರಕ್ಷಿತವಾಗಿ ದಾಟಿ ಬಂದ ಭಾರತೀಯ ಹಡಗುಗಳ ಸಂಖ್ಯೆ 4ಕ್ಕೆ ಏರಿದೆ. ನಂದಾದೇವಿ, ಶಿವಾಲಿಕ್‌, ಜಗ್‌ ಲಾಡ್ಕಿ ಭಾರತಕ್ಕೆ ಬಂದಿದ್ದರೆ, ಜಗ್‌ ಪ್ರಕಾಶ್‌ ಹೋರ್ಮಜ್‌ ಜಲಸಂಧಿ ದಾಟಿ ಒಮಾನ್‌ನಿಂದ ಆಫ್ರಿಕಾದತ್ತ ಪ್ರಯಾಣ ಬೆಳೆಸಿತ್ತು.==

ಒಮಾನ್‌ನಿಂದ ಒಡಿಶಾಗೆ ತೈಲ:ಪರದೀಪ್‌: ಹೋರ್ಮುಜ್‌ನಲ್ಲಿ ಸಿಲುಕಿರುವ ಹಡಗುಗಳ ಕಡೆ ಎಲ್ಲರ ಚಿತ್ತ ನೆಟ್ಟಿರುವ ಹೊತ್ತಿನಲ್ಲೇ, ಕಚ್ಚಾತೈಲ ಹೊತ್ತ ಎಂಟಿ ಫ್ಲೋರಾ ಎಂಬ ಹಡಗು ಒಮಾನ್‌ನಿಂದ ಒಡಿಶಾದ ಪರದೀಪ್‌ ಬಂದರನ್ನು ತಲುಪಿದೆ. ಇದರಲ್ಲಿ 2.5 ಲಕ್ಷ ಮೆಟ್ರಿಕ್‌ ಟನ್‌ನಷ್ಟು ರಷ್ಯಾದ ಕಚ್ಚಾತೈಲವಿದ್ದು, ದೇಶದಲ್ಲಿ ತೈಲ ಹಾಗೂ ಅನಿಲಕ್ಕೆ ತತ್ವಾರ ಇರುವ ಹೊತ್ತಿನಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.