‘ಮೋದಿಯ ಹನುಮಾನ್‌’ ಚಿರಾಗ್‌ ಮೋಡಿ : 29 ರಲ್ಲಿ 20 ಸ್ಥಾನ ಜಯ

| N/A | Published : Nov 15 2025, 03:00 AM IST

Chirag
‘ಮೋದಿಯ ಹನುಮಾನ್‌’ ಚಿರಾಗ್‌ ಮೋಡಿ : 29 ರಲ್ಲಿ 20 ಸ್ಥಾನ ಜಯ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿಯ ಬಿಹಾರ ಚುನಾವಣೆಯಲ್ಲಿ ಎನ್‌ಡಿಎದ ಅತಿದೊಡ್ಡ ಗೆಲುವಿನಲ್ಲಿ ಮೈತ್ರಿಕೂಟದ ಭಾಗವಾಗಿರುವ ಚಿರಾಗ್‌ ಪಾಸ್ವಾನ್‌ ಕೂಡಾ ಪ್ರಮುಖ ಪಾತ್ರ ವಹಿಸಿದ್ದಾರೆ. ಚಿರಾಗ್‌ ನೇತೃತ್ವದ ಲೋಕ ಜನಶಕ್ತಿ ಪಾರ್ಟಿ (ರಾಮ್‌ ವಿಲಾಸ್‌) ಕಣಕ್ಕಿಳಿದ 29ರ ಪೈಕಿ 19 ಸ್ಥಾನಗಳಲ್ಲಿ ಗೆದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.

 ಪಟನಾ: ಈ ಬಾರಿಯ ಬಿಹಾರ ಚುನಾವಣೆಯಲ್ಲಿ ಎನ್‌ಡಿಎದ ಅತಿದೊಡ್ಡ ಗೆಲುವಿನಲ್ಲಿ ಮೈತ್ರಿಕೂಟದ ಭಾಗವಾಗಿರುವ ಚಿರಾಗ್‌ ಪಾಸ್ವಾನ್‌ ಕೂಡಾ ಪ್ರಮುಖ ಪಾತ್ರ ವಹಿಸಿದ್ದಾರೆ. ಚಿರಾತ್‌ ನೇತೃತ್ವದ ಲೋಕ ಜನಶಕ್ತಿ ಪಾರ್ಟಿ (ರಾಮ್‌ ವಿಲಾಸ್‌) ಕಣಕ್ಕಿಳಿದ 29ರ ಪೈಕಿ 19 ಸ್ಥಾನಗಳಲ್ಲಿ ಗೆದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಎಲ್‌ಜೆಪಿ 19 ಸ್ಥಾನಗಳನ್ನು ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದೆ

243 ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಜೆಡಿಯು 101 ಕ್ಷೇತ್ರ ಹಂಚಿಕೊಂಡವು. ಆದರೆ ಚಿರಾಗ್‌ ಪಾಸ್ವಾನ್‌ ಪ್ರಯಾಸಪಟ್ಟು 29 ಕ್ಷೇತ್ರ ಪಡೆದಿದ್ದರು. ಕಳೆದ ಚುನಾವಣೆಯಲ್ಲಿ ಕೇವಲ 1 ಸ್ಥಾನ ಪಡೆದಿದ್ದ ಪಕ್ಷಕ್ಕೆ ಇಷ್ಟೊಂದು ಕ್ಷೇತ್ರ ನೀಡಿದ್ದಕ್ಕೆ ಅಪಸ್ವರ ಕೇಳಿಬಂದಿತ್ತು. ಆದರೆ ಇದೀಗ ಎಲ್‌ಜೆಪಿ 19 ಸ್ಥಾನಗಳನ್ನು ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದೆ.

2020ರಲ್ಲಿ ನಿತೀಶ್‌ ಕುಮಾರ್‌ ಜೊತೆಗಿನ ಭಿನ್ನಾಭಿಪ್ರಾಯ

2020ರಲ್ಲಿ ನಿತೀಶ್‌ ಕುಮಾರ್‌ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ಎಲ್‌ಜೆಪಿಯು ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಸ್ಪರ್ಧಿಸಿದ್ದ 130ರಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಕೆಲವೆಡೆ ಜೆಡಿಯುವಿನ ಮತ ಕಸಿಯುವಲ್ಲಿಯೂ ಯಶಸ್ವಿಯಾಗಿತ್ತು. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. 

ಇದು ‘ಯುವ ಬಿಹಾರಿ’ ಎಂದೇ ತಮ್ಮನ್ನು ಕರೆದುಕೊಳ್ಳುವ 43 ವರ್ಷದ ಚಿರಾಗ್‌ರ ಆತ್ಮವಿಶ್ವಾಸ ಹೆಚ್ಚಿಸಿತ್ತು. ಹೀಗಾಗಿ ಈ ಬಾರಿ ಕಷ್ಟಪಟ್ಟು 29 ಕ್ಷೇತ್ರಗಳನ್ನು ಪಡೆದುಕೊಂಡಿದ್ದರು. ಜೊತೆಗೆ, ತಾವು ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಬಿಂಬಿಸಿಕೊಂಡಿದ್ದರು. ತಾನು ‘ಮೋದಿಯವರ ಹನುಮಾನ್‌’ ಎನ್ನುತ್ತಾ ಭರ್ಜರಿ ಪ್ರಚಾರ ನಡೆಸಿದ್ದರು. ಹೀಗಾಗಿ 19 ಸ್ಥಾನಗಳನ್ನು ಗೆದ್ದು ಹೊಸ ಭರವಸೆ ಮೂಡಿಸಿದ್ದಾರೆ.

Read more Articles on