ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಪ್ರಕರಣ : ತೆಲುಗು ನಟ ಮಂಚು ಮೋಹನ್ ಬಾಬುಬಾಬುಗೂ ಬಂಧನ ಭೀತಿ

| Published : Dec 14 2024, 12:47 AM IST / Updated: Dec 14 2024, 04:48 AM IST

ಸಾರಾಂಶ

ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಮಂಚು ಮೋಹನ್ ಬಾಬು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತೆಲಂಗಾಣ ಹೈಕೋರ್ಟ್‌ ವಜಾಗೊಳಿಸಿದೆ.

ಹೈದರಾಬಾದ್‌: ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಮಂಚು ಮೋಹನ್ ಬಾಬು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತೆಲಂಗಾಣ ಹೈಕೋರ್ಟ್‌ ವಜಾಗೊಳಿಸಿದೆ.

ಬಾಬು ಅವರ ಆಸ್ತಿ ವಿವಾದ ಕುರಿತ ವರದಿಗಾರಿಕೆಗೆ ತೆರಳಿದ್ದ ಪತ್ರಕರ್ತನೊಬ್ಬನ ಮೇಲೆ ಮೈಕ್‌ನಿಂದ ಹೊಡೆದು ಬಾಬು ಹಲ್ಲೆ ಮಾಡಿದ್ದರು. ಪತ್ರಕರ್ತ ತೀವ್ರವಾಗಿ ಗಾಯಗೊಂಡಿದ್ದ. ಹೀಗಾಗಿ ಪಹಾಡಿ ಶರೀಫ್‌ ಪೊಲೀಸ್‌ ಠಾಣೆಯಲ್ಲಿ ಕೊಲೆ ಯತ್ನ ಕೇಸು ಅವರ ಮೇಲೆ ದಾಖಲಾಗಿತ್ತು. ಈ ಕೇಸಲ್ಲಿ ಅವರು ನಿರೀಕ್ಷಣಾ ಜಾಮೀನು ಕೋರಿದ್ದರು. ಆದರೆ ಹೈಕೋರ್ಟು. ನಟನ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ, ಪತ್ರಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಮೋಹನ್ ಬಾಬು ಈ ಬಗ್ಗೆ ಕ್ಷಮೆ ಕೇಳಿದ್ದರು. ಪತ್ರಕರ್ತರಿಗೆ ಹಾನಿ ಮಾಡುವ ಉದ್ದೇಶವಿರಲಿಲ್ಲ. ಆತ ಪತ್ರಕರ್ತ ಎಂದು ತಿಳಿದಿರಲಿಲ್ಲ ಎಂದಿದ್ದರು.