ನೇಪಾಳದಲ್ಲಿ ಪುನಃ ಹಿಂದೂ ರಾಜಪ್ರಭುತ್ವ ಮರಳಬೇಕು ಎಂದು ಆಗ್ರಹಿಸಿ ಹಿಂಸೆ : 2 ಬಲಿ

| N/A | Published : Mar 29 2025, 12:31 AM IST / Updated: Mar 29 2025, 06:18 AM IST

ಸಾರಾಂಶ

ನೇಪಾಳದಲ್ಲಿ ಪುನಃ ಹಿಂದೂ ರಾಜಪ್ರಭುತ್ವ ಮರಳಬೇಕು ಎಂದು ಆಗ್ರಹಿಸಿ ಜನರು ಪ್ರತಿಭಟನೆ ನಡೆಸಿದ್ದು, ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದೆ. ಇದರಲ್ಲಿ ಇಬ್ಬರು ಸಾವನ್ನಪ್ಪಿ 30 ಮಂದಿ ಗಾಯಗೊಂಡಿದ್ದಾರೆ. ಸ್ಥತಿ ನಿಯಂತ್ರಣಕ್ಕೆ ಸೇನೆ ನಿಯೋಜಿಸಲಾಗಿದೆ.

ಕಾಠ್ಮಂಡು: ನೇಪಾಳದಲ್ಲಿ ಪುನಃ ಹಿಂದೂ ರಾಜಪ್ರಭುತ್ವ ಮರಳಬೇಕು ಎಂದು ಆಗ್ರಹಿಸಿ ಜನರು ಪ್ರತಿಭಟನೆ ನಡೆಸಿದ್ದು, ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದೆ. ಇದರಲ್ಲಿ ಇಬ್ಬರು ಸಾವನ್ನಪ್ಪಿ 30 ಮಂದಿ ಗಾಯಗೊಂಡಿದ್ದಾರೆ. ಸ್ಥತಿ ನಿಯಂತ್ರಣಕ್ಕೆ ಸೇನೆ ನಿಯೋಜಿಸಲಾಗಿದೆ.

2008ರಲ್ಲಿ ನೇಪಾಳದಲ್ಲಿ 240 ವರ್ಷಗಳಷ್ಟು ಹಳೆಯದಾದ ರಾಜಪ್ರಭುತ್ವ ರದ್ದುಗೊಳಿಸಿ, ಪ್ರಜಾಪ್ರಭುತ್ವ ಜಾರಿಗೆ ತರಲಾಗಿತ್ತು . ಆದರೆ ಸರ್ಕಾರಗಳು ಆಡಳಿತದಲ್ಲಿ ವಿಫಲವಾಗಿವೆ ಎಂದು ಆರೋಪಿಸಿ ಶುಕ್ರವಾರ ಸಾವಿರಾರು ಹೋರಾಟಗಾರರು ಪ್ರತಿಭಟನೆ ನಡೆಸಿದರು, ‘ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಿರಿ. ರಾಜಪ್ರಭುತ್ವ ಮರಳಿ ಬರಲಿ’ ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು, ಜಲಫಿರಂಗಿಗಳನ್ನು ಪ್ರಯೋಗಿಸಿದರು. ಇನ್ನು ಇದೇ ಸಂದರ್ಭದಲ್ಲಿ ಉದ್ರಿಕ್ತರು ಮನೆಗಳಿಗೆ ಬೆಂಕಿ ಹಂಚಿ, ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ತೆಗೆಯಲು ಮುಂದಾದರು. ಕೊನೆಗೆ ಕಲ್ಲು ತೂರಾಟ ನಡೆಸಿದ ಪ್ರಸಂಗವೂ ನಡೆಯಿತು.

ಕೆಲವು ಪ್ರತಿಭಟನಾಕಾರರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಭಾವಚಿತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.