ಅಯೋಧ್ಯೆ: ಗರ್ಭಗುಡಿಗೆ ಮಾರುತಿ ಪ್ರವೇಶ

| Published : Jan 24 2024, 02:01 AM IST / Updated: Jan 24 2024, 11:53 AM IST

ಸಾರಾಂಶ

2024 ರ ಚುನಾವಣೆಗಾಗಿ ದೇಶದೆಲ್ಲೆಡೆ ಸಮಾವೇಶಗಳ ಆಯೋಜನೆಗೆ ಕಾಂಗ್ರೆಸ್‌ ಸಿದ್ಧತೆ ನಡೆಸಿದೆ. ನಾಳೆ ತೆಲಂಗಾಣದಲ್ಲಿ ಮೊದಲ ಸಮಾವೇಶ ನಡೆಯಲಿದೆ. ಎಲ್ಲ ಸಭೆಗೆ ಖರ್ಗೆ ಅಧ್ಯಕ್ಷತೆ ವಹಿಸಲಿದ್ದಾರೆ.

ಅಯೋಧ್ಯೆ: ರಾಮ ಮಂದಿರದ ಗರ್ಭಗುಡಿಗೆ ಮಂಗಳವಾರ ಸಂಜೆ 5:50ರ ವೇಳೆಗೆ ಕೋತಿಯೊಂದು ಪ್ರವೇಶಿಸಿದ ಪ್ರಸಂಗ ನಡೆದಿದೆ. ಅದೃಷ್ಟವಶಾತ್‌ ಯಾವುದೇ ತೊಂದರೆ ಕೊಡದೆ ಸುಮ್ಮನೆ ಹೊರಹೋಗಿದೆ. 

ಇದನ್ನು ಕಂಡ ಜನರು ‘ರಾಮನನ್ನು ಭೇಟಿ ಮಾಡಲು ಹನುಮ ಬಂದಿದ್ದಾನೆ’ ಎಂದು ವರ್ಣಿಸಿದ್ದಾರೆ.

ದೇಗುಲದ ದಕ್ಷಿಣ ದ್ವಾರದಿಂದ ಪ್ರವೇಶಿಸಿದ ಕೋತಿ, ನೇರವಾಗಿ ಗರ್ಭಗುಡಿ ಒಳಗೆ ಪ್ರವೇಶಿಸಿತು. ಇದನ್ನು ಕಂಡ ಭದ್ರತಾ ಸಿಬ್ಬಂದಿಯೊಬ್ಬರು ಉತ್ಸವ ಮೂರ್ತಿಯನ್ನು ಬೀಳಿಸುತ್ತದೆ ಎಂಬ ಆತಂಕದಿಂದ ಗರ್ಭಗುಡಿ ಕಡೆಗೆ ಬಂದರು. 

ಇದನ್ನು ಕಂಡ ವಾನರ, ನಿಧಾನವಾಗಿ ಪೂರ್ವ ದ್ವಾರದ ಕಡೆಗೆ ತೆರಳಿ ಯಾವುದಕ್ಕೂ, ಯಾರಿಗೂ ಹಾನಿ ಮಾಡದೆ ಹೊರಹೋಗಿದೆ ಎಂದು ಸ್ವತಃ ರಾಮಮಂದಿರ ನಿರ್ಮಾಣ ಟ್ರಸ್ಟ್‌ ಮಾಹಿತಿ ನೀಡಿದೆ.

ರಾಮಮಂದಿರದ ಗರ್ಭಗುಡಿಗೆ ಶ್ರೀರಾಮನ ಬಂಟನಾದ ಹನುಮಂತ ಸ್ವರೂಪಿ ವಾನರವೊಂದು ಪ್ರವೇಶಿಸಿ ಅವಾಂತರ ಸೃಷ್ಟಿಸಿದ್ದಾಗಿ ಟ್ರಸ್ಟ್‌ ತಿಳಿಸಿದೆ.