ಸಾರಾಂಶ
ಭೋಪಾಲ್: ದೇಶದಲ್ಲಿ ಭಾಷಾ ಸಂಘರ್ಷಗಳು ತೀವ್ರವಾಗುತ್ತಿರುವ ಹಿನ್ನೆಲೆ ಪರಸ್ಪರ ಭಾಷೆಗಳ ನಡುವೆ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಮಧ್ಯಪ್ರದೇಶ ಸರ್ಕಾರ ರಾಜ್ಯದ 17 ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಸೇರಿ ದೇಶದ ಸುಮಾರು 15 ಭಾಷೆಗಳನ್ನು ಕಲಿಸಲು ಮುಂದಾಗಿದೆ.
ದೇಶದಲ್ಲಿ ಸದ್ಯ 12 ರಾಷ್ಟ್ರೀಯ ಮತ್ತು 22 ಪ್ರಾದೇಶಿಕ ಭಾಷೆಗಳಿವೆ. ರಾಜ್ಯದ 17 ವಿವಿಗಳಲ್ಲಿ ಕನ್ನಡ, ತಮಿಳು, ತೆಲುಗು ಸೇರಿ 12-15 ಭಾಷೆಗಳನ್ನು ಪ್ರಸಕ್ತ ವರ್ಷದಿಂದಲೇ ಆರಂಭಿಸುವುದಾಗಿ ಉನ್ನತ ಶಿಕ್ಷಣ ಇಲಾಖೆ ಘೋಷಿಸಿದೆ. ಈ ಬಗ್ಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಇಂದರ್ ಸಿಂಗ್ ಪರಮಾರ್, ‘ಭಾರತದ ಹೃದಯಭೂಮಿಯಾಗಿರುವ ಮಧ್ಯಪ್ರದೇಶವನ್ನು ಭಾಷಾ ಏಕತೆಯ ಕೇಂದ್ರವಾಗಿಸುವುದು ನಮ್ಮ ಆಶಯ. ಇದರಿಂದಾಗಿ, ರಾಜ್ಯದ ಯುವಕರು ದೇಶದ ಯಾವುದೇ ರಾಜ್ಯ ಅಥವಾ ಪ್ರದೇಶಕ್ಕೆ ಹೋದರೆ, ಅಲ್ಲಿನ ನಿವಾಸಿಗಳೊಂದಿಗೆ ಸುಲಭವಾಗಿ ಮತ್ತು ಆತ್ಮೀಯತೆಯಿಂದ ಸಂವಹನ ನಡೆಸಲು ಸಾಧ್ಯವಾಗುತ್ತದೆ’ ಎಂದಿದ್ದಾರೆ.
===ಈ ಕ್ರಮಕ್ಕೆ ವಿಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ‘ಇದು ಚುನಾವಣಾ ಲಾಭವನ್ನು ಗುರಿಯಾಗಿಟ್ಟುಕೊಂಡು ನಡೆಸುತ್ತಿರುವ ಪ್ರಚಾರದ ತಂತ್ರ. ಈ ಯೋಜನೆ ಯಾವುದೇ ಪ್ರಾಯೋಗಿಕ ಪ್ರಯೋಜನವನ್ನು ಹೊಂದಿರುವುದಿಲ್ಲ’ ಎಂದಿದೆ.