ಸಾರಾಂಶ
ಮುಂಬೈ: ರಾಮಮಂದಿರ ಉದ್ಘಾಟನೆಗೂ ಮುನ್ನ ಆಯೋಜಿಸಲಾಗಿದ್ದ ಬೈಕ್ ರ್‍ಯಾಲಿಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಮುಂಬೈನ ಮೀರಾ ರಸ್ತೆಯಲ್ಲಿ ನಡೆದಿದೆ. ಬೈಕ್ ರ್‍ಯಾಲಿ ಮೇಲೆ ಮುಸ್ಲಿಂ ಯುವಕರ ಗುಂಪೊಂದು ದಾಳಿ ನಡೆಸಿದೆ. ಈ ವೇಳೆ ಬೈಕ್‌ನಲ್ಲಿದ್ದವರು ಕೂಡಾ ಪ್ರತಿದಾಳಿ ನಡೆಸಿದ ಕಾರಣ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ಭಾನುವಾರ ರಾತ್ರಿ ಆರಂಭವಾದ ಈ ಹಿಂಸಾಚಾರ ಸೋಮವಾರವೂ ಮುಂದುವರೆದಿತ್ತು. ಘಟನೆ ಸಂಬಂಧ 13 ಜನರನ್ನು ಬಂಧಿಸಲಾಗಿದೆ.ಈ ನಡುವೆ ದಾಳಿಕೋರರಿಗೆ ಸೇರಿದ್ದು ಎನ್ನಲಾದ ಮೀರಾ ರಸ್ತೆಯಲ್ಲಿ ನಿರ್ಮಿತ ಅಕ್ರಮ ಕಟ್ಟಡಗಳನ್ನು ಮಂಗಳವಾರ ಮಹಾನಗರ ಪಾಲಿಕೆ ಅಧಿಕಾರಿಗಳು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದ್ದಾರೆ.ಬಿಜೆಪಿಯಿಂದ ಮಂದಿರ ವಿವಾದ ಅಂತ್ಯ, ಇನ್ನು ಒಂದಾಗಿರಿ: ಅನ್ಸಾರಿ ಕರೆಬಿಜೆಪಿಯು ರಾಮಮಂದಿರದ ವಿವಾದಕ್ಕೆ ಅಂತ್ಯ ಹಾಡಿದ್ದು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದಂತೆ ಇನ್ನು ಮುಂದಾದರೂ ನಾವು ಸಣ್ಣಪುಟ್ಟ ವಿಚಾರಗಳಿಗೆ ಸಂಘರ್ಷ ಮಾಡುವುದನ್ನು ನಿಲ್ಲಿಸಬೇಕು ಎಂದು ಬಾಬ್ರಿ ಮಸೀದಿ-ರಾಮಮಂದಿರ ಪ್ರಕರಣದ ಪ್ರಮುಖ ಅರ್ಜಿದಾರಿ ಇಕ್ಬಾಲ್ ಅನ್ಸಾರಿ ತಿಳಿಸಿದರು. ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಾನು ಸೋಮವಾರದಂದು ಪ್ರಾಣಪ್ರತಿಷ್ಠಾಪನೆಯಲ್ಲಿ ಭಾಗವಹಿಸಿ ದೆ. ಅಲ್ಲಿ ಮೋಹನ್ ಭಾಗವತ್ ತಿಳಿಸಿದಂತೆ ಇನ್ನು ಸಂಘರ್ಷ ಬಿಟ್ಟು ದೇಶದ ಜನರು ಒಗ್ಗಟ್ಟಾಗಬೇಕು’ ಎಂದು ತಿಳಿಸಿದರು.ಇದೇ ವೇಳೆ ಬಾಬ್ರಿ ಮಸೀದಿಯನ್ನು ಕೆಡವಲು ಆದೇಶಿಸಿದ್ದು ಕಾಂಗ್ರೆಸ್ ಪಕ್ಷ. ಅವರೇ ಮಸೀದಿಯಲ್ಲಿ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾಗಿ ನನ್ನ ತಂದೆ ಹೇಳಿದ್ದಾರೆ. ಬಿಜೆಪಿ ಕೇವಲ ಮಂದಿರವನ್ನು ಕಟ್ಟಿ ವಿವಾದವನ್ನು ಅಂತ್ಯಗೊಳಿಸುವ ಕೆಲಸವನ್ನು ಮಾತ್ರ ಮಾಡಿದೆ’ ಎಂದು ತಿಳಿಸಿದರು.