ಸಾರಾಂಶ
ಮುಂಬೈ: ಐಸ್‌ಕ್ರೀಂನಲ್ಲಿ ಡ್ರೈಫ್ರೂಟ್ಸ್ ಸಿಗುವುದು. ಆದರೆ ಮುಂಬೈನ ವೈದ್ಯರೊಬ್ಬರಿಗೆ ಐಸ್‌ಕ್ರೀಂನಲ್ಲಿ ಡ್ರೈಫ್ರೂಟ್ಸ್ ಜೊತೆಗೆ ಮಾನವನ ಬೆರಳು ಕೂಡಾ ಸಿಕ್ಕಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಯುಮ್ಮೋ ಐಸ್‌ಕ್ರೀಮ್ ಆ್ಯಪ್ ಮುಖಾಂತರ ಐಸ್‌ಕ್ರೀಮ್ ಆರ್ಡರ್ ಮಾಡಿದ್ದ ವೇಳೆ ಘಟನೆ ನಡೆದಿದೆ.
ನಡೆದಿದ್ದು ಏನು?: ವೈದ್ಯರೊಬ್ಬರು ಆ್ಯಪ್ ಮುಖಾಂತರ ಮೂರು ಕೋನ್ ಐಸ್‌ಕ್ರೀಮ್ ಆರ್ಡರ್ ಮಾಡಿದ್ದರು. ಒಂದು ಐಸ್‌ಕ್ರೀಮ್‌ನ ಅರ್ಧ ಭಾಗ ತಿಂದಾಗ ಬಾಯಿಯಲ್ಲಿ ಗಟ್ಟಿಯಾದ ವಸ್ತುವೊಂದು ಅವರಿಗೆ ದೊರೆಕಿದೆ. ಅದು ಚಾಕೋಲೇಟ್ ತುಂಡು ಎಂದು ವೈದ್ಯರು ಭಾವಿಸಿದ್ದರು. ಆದರೆ ಅದನ್ನು ಹೊರಡಗೆ ತಗೆದು ನೋಡಿದಾಗ ಅದು ಮಾನವ ಬೆಳರೆಂದು ಗೊತ್ತಾಗಿದೆ.ಉಗರು ಮತ್ತು ಬೆರಳಚ್ಚು ಗುರುತುಗಳು ಪತ್ತೆಯಾಗಿದ್ದು, ಅದು ಮಾನವನ ಹೆಬ್ಬೆರಳನ್ನು ಹೋಲುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ನಂತರ ಅವರು ಮುಂಬೈನ ಮಲಾಡ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐಸ್‌ಕ್ರೀಮ್ ಕಂಪನಿಯನ್ನು ತನಿಖೆ ಮಾಡಲು ವಿಧಿ ವಿಜ್ಞಾನ ತಂಡವೊಂದನ್ನು ಕಳುಹಿಸಿದ್ದಾರೆ.