ಮಹಾದೇವ ಬೆಟ್ಟಿಂಗ್‌ ಆಪ್‌ ಪ್ರಕರಣ: ನಟ ಸಾಹಿಲ್‌ ಖಾನ್‌ ಬಂಧನ

| Published : Apr 29 2024, 01:38 AM IST / Updated: Apr 29 2024, 05:01 AM IST

ಸಾರಾಂಶ

15000 ಕೋಟಿ ರು.ಮೊತ್ತದ ಮಹಾದೇವ ಬೆಟ್ಟಿಂಗ್‌ ಆಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಾಹಿಲ್‌ ಖಾನ್‌ ಅವರನ್ನು ಮುಂಬೈ ಸೈಬರ್‌ ಘಟಕದ ವಿಶೇಷ ತನಿಖಾ ತಂಡ (ಎಸ್‌ಐಟಿ) ಭಾನುವಾರ ಬಂಧಿಸಿದೆ.

ಮುಂಬೈ: 15000 ಕೋಟಿ ರು.ಮೊತ್ತದ ಮಹಾದೇವ ಬೆಟ್ಟಿಂಗ್‌ ಆಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಾಹಿಲ್‌ ಖಾನ್‌ ಅವರನ್ನು ಮುಂಬೈ ಸೈಬರ್‌ ಘಟಕದ ವಿಶೇಷ ತನಿಖಾ ತಂಡ (ಎಸ್‌ಐಟಿ) ಭಾನುವಾರ ಬಂಧಿಸಿದೆ.

 ಇತ್ತೀಚೆಗೆ ಎಸ್‌ಐಟಿ, ಸಾಹಿಲ್‌ರನ್ನು ವಿಚಾರಣೆಗೆ ಒಳಪಡಿಸಿತ್ತು. ಈ ಹಿನ್ನೆಲೆಯಲ್ಲಿ ಸಾಹಿಲ್‌ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರಾದರೂ ಕೋರ್ಟ್‌ ಅದನ್ನು ತಿರಸ್ಕರಿಸಿತ್ತು. ಅದರ ಬೆನ್ನಲ್ಲೇ ಅಧಿಕಾರಿಗಳ ಅವರನ್ನು ಛತ್ತೀಸ್‌ಗಢದಲ್ಲಿ ಬಂಧಿಸಿದ್ದಾರೆ. ಬೆಟ್ಟಿಂಗ್‌ ಆ್ಯಪ್‌ ಅನ್ನು ವಿವಿಧ ಮಾದ್ಯಮಗಳಲ್ಲಿ ಉತ್ತೇಜಿಸಿದ ಪ್ರಕರಣದಲ್ಲಿ ಸಾಹಿಲ್‌ರನ್ನು ಬಂಧಿಸಲಾಗಿದೆ.