ಡಿಜಿಟಲ್‌ ಅರೆಸ್ಟ್‌ : ಮುಂಬೈ ಮಹಿಳೆಗೆ ₹1.7 ಲಕ್ಷ ವಂಚನೆ - ಬೆತ್ತಲೆ ವಿಡಿಯೋ ಶೂಟ್‌

| Published : Dec 02 2024, 01:16 AM IST / Updated: Dec 02 2024, 04:52 AM IST

ಸಾರಾಂಶ

  ಮುಂಬೈನ ಮಹಿಳೆಯೊಬ್ಬರಿಗೆ ವಿಡಿಯೋ ಕಾಲ್‌ ಮಾಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ನಿಮ್ಮ ಹೆಸರು ಬೆಳಕಿಗೆ ಬಂದಿದೆ ಎಂದು ಹೇಳಿ ₹1.7 ಲಕ್ಷ ರು. ಪೀಕಿ, ಆಕೆಯನ್ನು ಬೆತ್ತಲೆ ವಿಡಿಯೋ ಶೂಟ್‌ ಮಾಡಿದ ಘಟನೆ ನಡೆದಿದೆ.

ಮುಂಬೈ: ಇತ್ತೀಚೆಗೆ ಡಿಜಿಟಲ್‌ ಅರೆಸ್ಟ್‌ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜಾಗೃತಿ ಮೂಡಿಸಿದ್ದರೂ ವಂಚನೆಗಳು ನಿಂತಿಲ್ಲ. ಮುಂಬೈನ ಮಹಿಳೆಯೊಬ್ಬರಿಗೆ ವಿಡಿಯೋ ಕಾಲ್‌ ಮಾಡಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ನಿಮ್ಮ ಹೆಸರು ಬೆಳಕಿಗೆ ಬಂದಿದೆ ಎಂದು ಹೇಳಿ ₹1.7 ಲಕ್ಷ ರು. ಪೀಕಿ, ಆಕೆಯನ್ನು ಬೆತ್ತಲೆ ವಿಡಿಯೋ ಶೂಟ್‌ ಮಾಡಿದ ಘಟನೆ ನಡೆದಿದೆ.

ಇಲ್ಲಿನ ಪೂರ್ವ ಬೊರಿವಾಲಿಯಲ್ಲಿನ ಮಹಿಳೆಯೊಬ್ಬರಿಗೆ ವಂಚಕನೊಬ್ಬ ನ.19 ರಂದು ವಿಡಿಯೋ ಕಾಲ್‌ ಮಾಡಿ, ತಾನು ದೆಹಲಿ ಪೊಲೀಸ್‌ ಅಧಿಕಾರಿ ಎಂದು ಹೇಳಿದ್ದಾನೆ. ‘ಪ್ರಸ್ತುತ ಜೈಲಿನಲ್ಲಿರುವ ಜೆಟ್‌ ಏರ್‌ವೇಸ್‌ ಸಂಸ್ಥಾಪಕ ನರೇಶ್‌ ಗೋಯಲ್‌ ಅವರಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ನಿಮ್ಮ ಹೆಸರು ಬೆಳಕಿಗೆ ಬಂದಿದೆ. ಆದ್ದರಿಂದ ನಿಮ್ಮನ್ನು ಡಿಜಿಟಲ್‌ ಅರೆಸ್ಟ್‌ ಮಾಡಲಾಗಿದೆ’ ಎಂದು ತಿಳಿಸಿದ್ದಾನೆ.

‘ಜತೆಗೆ ಆಕೆಯ ಖಾತೆಯಿಂದ 1.78 ಲಕ್ಷ ರು. ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಹಾಗೂ ಭೌತಿಕವಾಗಿ ಪರಿಶೀಲಿಸಬೇಕೆಂದು ಹೇಳಿ ಆಕೆಯನ್ನು ಬೆತ್ತಲೆಯಾಗಿ ನಿಲ್ಲಲು ಸೂಚಿಸಿದ್ದಾರೆ. ನಿಜವಾದ ಪೊಲೀಸ್‌ ಅಧಿಕಾರಿಯೆಂದು ಭಾವಿಸಿ ವಂಚಕರ ಸೂಚನೆಗಳನ್ನುಅನುಸರಿಸಿ ಮಹಿಳೆ ಮೋಸ ಹೋಗಿದ್ದಾಳೆ.

ಇತ್ತೀಚೆಗೆ ಮೋದಿ ಅವರು ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಈ ಡಿಜಿಟಲ್‌ ಅರೆಸ್ಟ್‌ ಬಗ್ಗೆ ಜಾಗೃತಿ ಮೂಡಿಸಿದ್ದರು.