ಸಾರಾಂಶ
ಮುಂಬೈಯಲ್ಲಿ 22 ವರ್ಷದ ವ್ಯಕ್ತಿಯೊಬ್ಬ ತನಗೆ ಬೆಂಕಿ ಕಡ್ಡಿ ಕೊಡಲಿಲ್ಲ ಎಂಬ ಕಾರಣಕ್ಕೆ 53 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿದ್ದಾನೆ.
ಜಗತ್ತಿನಲ್ಲಿ ತೀರಾ ಕ್ಷುಲ್ಲಕ ಕಾರಣಕ್ಕೆ ಕೊಲೆಗಳು ನಡೆಯುತ್ತಲೇ ಇರುತ್ತವೆ. ಮುಂಬೈಯಲ್ಲಿ 22 ವರ್ಷದ ವ್ಯಕ್ತಿಯೊಬ್ಬ ತನಗೆ ಬೆಂಕಿ ಕಡ್ಡಿ ಕೊಡಲಿಲ್ಲ ಎಂಬ ಕಾರಣಕ್ಕೆ 53 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿದ್ದಾನೆ. ಇಲ್ಲಿನ ಶೇಖ್ ಬೇಲಾಪುರ ರಸ್ತೆಯಲ್ಲಿ ಹಾದು ಹೋಗುತ್ತಿದ್ದ ವೇಳೆ ಆರೋಪಿ ಮೊಹಮ್ಮದ್ ಆದಿಲ್ ಅಜಮಾಲಿ ಶೇಖ್ ತುರ್ಭೆ ಎಂಬಾತ ವಾಚ್‌ಮೆನ್ ಪ್ರಸಾದ್ ಭಾನುಸಿಂಗ್ ಖಡ್ಕಾ ಅವರ ಬಳಿ ಬೆಂಕಿ ಕಡ್ಡಿ ನೀಡುವಂತೆ ಕೇಳಿದ್ದಾನೆ. ಆದರೆ ಪ್ರಸಾದ್ ನಿರಾಕರಿಸಿದ್ದೇ ತಡ, ದೊಡ್ಡದೊಂದು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿಯೇ ಬಿಟ್ಟಿದ್ದಾನೆ. ಈಗ ಆತ ಪೊಲೀಸರ ಅತಿಥಿ.