ಸಾರಾಂಶ
‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಜನರ ಆಸ್ತಿಯನ್ನು ನುಸುಳುಕೋರರು ಹಾಗೂ ಹೆಚ್ಚೆಚ್ಚು ಮಕ್ಕಳ ಹೆರುವವರಿಗೆ ಹಂಚಲಾಗುತ್ತದೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಎಐಎಂಐಎಂ ನಾಯಕ ಅಕ್ಬರುದ್ದೀನ್ ಒವೈಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್: ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಜನರ ಆಸ್ತಿಯನ್ನು ನುಸುಳುಕೋರರು ಹಾಗೂ ಹೆಚ್ಚೆಚ್ಚು ಮಕ್ಕಳ ಹೆರುವವರಿಗೆ ಹಂಚಲಾಗುತ್ತದೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಎಐಎಂಐಎಂ ನಾಯಕ ಅಕ್ಬರುದ್ದೀನ್ ಒವೈಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಭೆಯೊಂದರಲ್ಲಿ ಮಾತನಾಡಿದ ಒವೈಸಿ, ‘ನಾವು (ಮುಸ್ಲಿಮರು) ನುಸುಳುಕೋರರು ಮತ್ತು ಅನೇಕ ಮಕ್ಕಳನ್ನು ಹೊಂದಿರುವವರೇ? ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಎಷ್ಟು ಒಡಹುಟ್ಟಿದವರಿದ್ದರು ಎಂದು ನಿಮಗೆ ತಿಳಿದಿದೆಯೇ? ವಾಜಪೇಯಿ ಮತ್ತು ಅವರ ಒಡಹುಟ್ಟಿದವರ ಸಂಖ್ಯೆ 7. ಯೋಗಿ ಆದಿತ್ಯನಾಥ್ ಮತ್ತು ಅವರ ಒಡಹುಟ್ಟಿದವರ ಸಂಖ್ಯೆ 7. ಅಮಿತ್ ಶಾ ಮತ್ತು ಅವರ ಒಡಹುಟ್ಟಿದವರ ಸಂಖ್ಯೆಯೂ 7 ಮತ್ತು ನರೇಂದ್ರ ಮೋದಿ ಮತ್ತು ಅವರ ಒಡಹುಟ್ಟಿದವರ ಸಂಖ್ಯೆ 6..ನಾವು (ಮುಸ್ಲಿಮರು) ಈ ರಾಷ್ಟ್ರಕ್ಕೆ ತಾಜ್ ಮಹಲ್, ಕುತಾಬ್ ಮಿನಾರ್, ಜಮಾ ಮಸೀದಿ ಮತ್ತು ಚಾರ್ ಮಿನಾರ್ ನೀಡಿದ್ದೇವೆ. ನಾವು ನುಸುಳುಕೋರರಲ್ಲ’ ಎಂದು ತಿರುಗೇಟು ನೀಡಿದರು.