ಯೋಧರ ಕರೆದೊಯ್ಯಲು ಬಂದಿದ್ದ ಮ್ಯಾನ್ಮಾರ್‌ ಪ್ಲೇನ್ ಮಿಜೋರಂನಲ್ಲಿ ಅಪಘಾತ

| Published : Jan 24 2024, 02:05 AM IST

ಯೋಧರ ಕರೆದೊಯ್ಯಲು ಬಂದಿದ್ದ ಮ್ಯಾನ್ಮಾರ್‌ ಪ್ಲೇನ್ ಮಿಜೋರಂನಲ್ಲಿ ಅಪಘಾತ
Share this Article
  • FB
  • TW
  • Linkdin
  • Email

ಸಾರಾಂಶ

ಮಿಜೋರಂನಲ್ಲಿ ಮ್ಯಾನ್ಮಾರ್‌ಗೆ ಸೇರಿದ ವಿಮಾನವೊಂದು ಅಪಘಾತವಾಗಿದ್ದು, 8 ಮಂದಿಗೆ ಗಂಭೀರವಾದ ಗಾಯಗಳಾಗಿವೆ. ಈ ವಿಮಾನವು ಭಾರತಕ್ಕೆ ಪರಾರಿಯಾಗಿದ್ದು ಮ್ಯಾನ್ಮಾರ್‌ ಸೈನಿಕರನ್ನು ಕರೆದೊಯ್ಯಲು ಬಂದಿತ್ತು.

ಐಜ್ವಾಲ್‌: ಉಗ್ರರ ಉಪಟಳದಿಂದ ಹೆದರಿ ಭಾರತಕ್ಕೆ ಬಂದಿದ್ದ ತನ್ನ ಸೈನಿಕರ ಮರಳಿ ಕರೆದೊಯ್ಯಲು ಬಂದಿದ್ದ ಮ್ಯಾನ್ಮಾರ್‌ನ ವಿಮಾನವೊಂದು ಮಿಜೋರಂನ ಐಜ್ವಾಲ್‌ ನಿಲ್ದಾಣದಲ್ಲಿ ಲ್ಯಾಂಡ್‌ ಆಗುವಾಗ ಜಾರಿ ಅಪಘಾತಕ್ಕೆ ತುತ್ತಾಗಿದೆ.

ಈ ವೇಳೆ ವಿಮಾನದಲ್ಲಿದ್ದ ಪೈಲಟ್‌ ಸೇರಿ 14 ಜನರಿದ್ದು ಅವರಲ್ಲಿ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

‘ಬೆಳಗ್ಗೆ 10:20ರ ಸುಮಾರಿಗೆ ಅವಗಢ ಸಂಭವಿಸಿದೆ. ಬಿದ್ದ ರಭಸಕ್ಕೆ ವಿಮಾನ ಎರಡು ಹೋಳಾಗಿದೆ.

ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣವನ್ನು ಬಂದ್‌ ಮಾಡಿದ್ದು, ಗಾಯಗೊಂಡಿರುವವರು ಲೆಂಗ್‌ಮುಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ಈ ವಿಮಾನದಲ್ಲಿ 92 ಮ್ಯಾನ್ಮಾರ್‌ ಸೈನಿಕರು ಹಿಂದಿರುಗಬೇಕಿತ್ತು.