ಸಾರಾಂಶ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇದೇ 17ರಂದು 75ನೇ ಜನ್ಮದಿನ ಆಚರಿಸಿಕೊಳ್ಳಲಿದ್ದು, ಈ ನಿಮಿತ್ತ ಸೆ.21ರಂದು ಬಿಜೆಪಿ ಯುವಮೋರ್ಚಾ ದೇಶಾದ್ಯಂತ 75 ನಗರಗಳಲ್ಲಿ ‘ನಶಾ ಮುಕ್ತ ಭಾರತಕ್ಕೆ ನಮೋ ಯುವ ರನ್’ ಎಂಬ ಅಭಿಯಾನ ಹಮ್ಮಿಕೊಂಡಿದೆ. ಈ ಓಟಕ್ಕೆ ನಟ ಮಿಲಿಂದ್ ಸೋಮನ್ ಅವರನ್ನು ರಾಯಭಾರಿಯನ್ನಾಗಿಸಲಾಗಿದೆ.
ಈ ಅಭಿಯಾನವನ್ನು ಮಾದಕ ವಸ್ತು ಮುಕ್ತ ಭಾರತ, ಸ್ವದೇಶಿ ವಸ್ತು ಬಳಕೆ ಹೆಚ್ಚಿಸುವ ಅಂಗವಾಗಿ ಹಮ್ಮಿಕೊಳ್ಳಲಾಗಿದೆ. ಅಂದು ವಿಶ್ವಾದ್ಯಂತ 75 ನಗರಗಳಲ್ಲಿ ನಮೋ ಯುವ ರನ್ ನಡೆಯಲಿದೆ ಎಂದು ಯುವ ಮೋರ್ಚಾ ಅಧ್ಯಕ್ಷ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸಂಸದ ತೇಜಸ್ವಿ ಸೂರ್ಯ ಭಾನುವಾರ ಹೇಳಿದರು.
ಮಿಲಿಂದ್-ತೇಜಸ್ವಿ ಡಿಪ್ಸ್ ಮೋಡಿ:
ಕಾರ್ಯಕ್ರಮದಲ್ಲಿ ಬಳಿಕ ಯುವ ಸಂಸದ ತೇಜಸ್ವಿ ಸೂರ್ಯ ಮತ್ತು ನಟ ಮಿಲಿಂದ್ ಅವರು ಪುಷ್‌ಅಪ್‌ಗಳನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಸುಮಾರು 3 ನಿಮಿಷಗಳ ಕಾಲ ಯಾವುದೇ ವಿರಾಮವಿಲ್ಲದೇ ಇಬ್ಬರು ಮುಖಾಮುಖಿಯಾಗಿ ಪುಷ್‌ಅಪ್‌ಗಳನ್ನು ಮಾಡಿದ್ದು, ನೆರೆದಿರುವವರನ್ನು ನಿಬ್ಬೆರಗಾಗಿಸಿತು. ಇವರೊಂದಿಗೆ ಕೆಲ ಸಭಿಕರು ಸಹ ಡಿಪ್ಸ್ ಹೊಡೆದು ಗಮನಸೆಳೆದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))