ಸಾರಾಂಶ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಗಳಿಸಿದ್ದು, ಆಪ್‌ನ ಕನಸು ನುಚ್ಚುನೂರಾಗಿದೆ. ಬರೋಬ್ಬರಿ 27 ವರ್ಷಗಳ ನಂತರ ದೆಹಲಿ ಜನರ ಹೃದಯದಲ್ಲಿ ಕಮಲ ಅರಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಗಳಿಸಿದ್ದು, ಆಪ್‌ನ ಕನಸು ನುಚ್ಚುನೂರಾಗಿದೆ. ಬರೋಬ್ಬರಿ 27 ವರ್ಷಗಳ ನಂತರ ದೆಹಲಿ ಜನರ ಹೃದಯದಲ್ಲಿ ಕಮಲ ಅರಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಬಿಜೆಪಿ ಗೆಲುವಿಗೆ ಹಲವು ತಂತ್ರಗಳು ಕಾರಣವಾಗಿದ್ದು, ಅದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಮುಖ್ಯ ಕೆಲಸ ಮಾಡಿರುವುದು ಸ್ಪಷ್ಟವಾಗಿದೆ.
ದೆಹಲಿಯಲ್ಲಿ ಈ ಬಾರಿ ಬ್ರ್ಯಾಂಡ್ ಮೋದಿ ಎಂಬ ಹೆಸರು ವರ್ಕೌಟ್ ಆಗಿದೆ. ಆಮ್ ಆದ್ಮಿ ಪಕ್ಷದ ಒಂದೊಂದು ಪ್ರಮಾದವನ್ನು ಅತ್ಯಂತ ಕಠಿಣವಾಗಿ, ಲೇವಡಿಯಾಗಿ ಜನರ ಮುಂದೆ ಇಡುವಲ್ಲಿ ಮೋದಿ ಯಶಸ್ವಿಯಾದರು. ದೆಹಲಿಯಲ್ಲಿ ಬಿಜೆಪಿ ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿರಲಿಲ್ಲ. ಯಾವೊಬ್ಬ ರಾಜ್ಯ ನಾಯಕರ ಹೆಸರಿನಲ್ಲಿಯೂ ಮತ ಕೇಳಿರಲಿಲ್ಲ. ನರೇಂದ್ರ ಮೋದಿಯವರ ಆಡಳಿತವನ್ನೇ ಪ್ರಮುಖ ಅಸ್ತ್ರವಾಗಿಸಿ ‘ಮೋದಿ ಗ್ಯಾರಂಟಿ’ ಮೂಲಕ ಪ್ರಚಾರ ನಡೆಸಲಾಗಿತ್ತು. ಇವೆಲ್ಲವೂ ಬಿಜೆಪಿಗೆ ವರವಾಗಿ ಪರಿಣಮಿಸಿದೆ.