ಉತ್ತರದಲ್ಲಿ ಮಳೆಯಾರ್ಭಟ - 7 ಸಾವು : ಶಾಲಾ ಕಾಲೇಜುಗಳಿಗೆ ರಜೆ

| N/A | Published : Sep 02 2025, 01:00 AM IST

ಸಾರಾಂಶ

ಉತ್ತರ ಭಾರತದಲ್ಲಿ ವರುಣಾರ್ಭಟ ಮುಂದುವರಿದಿದ್ದು ಹಿಮಾಚಲಪ್ರದೇಶ, ಉತ್ತರಾಖಂಡ, ಪಂಜಾಬ್‌ನಲ್ಲಿ ಮಳೆ ಸಂಬಂಧಿ ದುರ್ಘಟನೆಗೆ ಮತ್ತೆ 7 ಜನರು ಬಲಿಯಾಗಿದ್ದಾರೆ. ಭಾರೀ ಮಳೆಯಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ಥವಾಗಿದೆ. ಮೂರೂ ರಾಜ್ಯಗಳ ಬಹುತೇಕ ಸ್ಥಳಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ನವದೆಹಲಿ: ಉತ್ತರ ಭಾರತದಲ್ಲಿ ವರುಣಾರ್ಭಟ ಮುಂದುವರಿದಿದ್ದು ಹಿಮಾಚಲಪ್ರದೇಶ, ಉತ್ತರಾಖಂಡ, ಪಂಜಾಬ್‌ನಲ್ಲಿ ಮಳೆ ಸಂಬಂಧಿ ದುರ್ಘಟನೆಗೆ ಮತ್ತೆ 7 ಜನರು ಬಲಿಯಾಗಿದ್ದಾರೆ. ಭಾರೀ ಮಳೆಯಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ಥವಾಗಿದೆ. ಮೂರೂ ರಾಜ್ಯಗಳ ಬಹುತೇಕ ಸ್ಥಳಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

76 ವರ್ಷದ ಅಧಿಕ ಮಳೆ:

ಹಿಮಾಚಲದಲ್ಲಿ ಆಗಸ್ಟ್‌ನಲ್ಲಿ 25.6 ಸೆಂ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಈ ಬಾರಿ 43.1 ಸೆಂ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.68ರಷ್ಟು ಅಧಿಕವಾಗಿದೆ. ಇದು 76 ವರ್ಷಗಳ ದಾಖಲೆಯಾಗಿದೆ. ಈ ಹಿಂದೆ 1927ರಲ್ಲಿ ಅತ್ಯಧಿಕ 54.2 ಸೆಂ.ಮೀ ಮಳೆಯಾಗಿತ್ತು. ರಾಜ್ಯದಲ್ಲಿ ಪ್ರತ್ಯೇಕ ಭೂಕುಸಿತ ಘಟನೆಗಳಿಗೆ ತಂದೆ ಮಗಳು ಸೇರಿ ಮೂವರು ಬಲಿಯಾಗಿದ್ದು, ಮನೆ ಕುಸಿದು ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ.

ಉತ್ತರಾಖಂಡದಲ್ಲಿ 2 ಸಾವು

ಉತ್ತರಾಖಂಡದಲ್ಲಿ ಮಳೆ ಮತ್ತು ಭೂಕುಸಿತದ ಘಟನೆ ಮುಂದುವರೆದಿದ್ದು, ಸೋಮವಾರ ಸೋನ್‌ಪ್ರಯಾಗ್‌-ಗೌರಿಕುಂಡ ಹೆದ್ದಾರಿಯಲ್ಲಿ ಕಲ್ಲು ಜಾರಿ ಇಬ್ಬರು ವಾಹನ ಸವಾರರು ಬಲಿಯಾಗಿದ್ದಾರೆ. 6 ಜನರು ಗಾಯಗೊಂಡಿದ್ದಾರೆ.

ಪಂಜಾಬ್‌ನಲ್ಲಿ ನಿಲ್ಲದ ಮಳೆ ಅಬ್ಬರ:

ಪಂಜಾಬ್‌ನಲ್ಲಿ ಬಹುತೇಕ ಭಾಗಗಳು ಜಲಾವೃತಗೊಂಡಿವೆ. ಲುಧಿಯಾನದಲ್ಲಿ ಸೋಮವಾರ 21.6 ಸೆಂ.ಮೀ ಮಳೆಯಾಗಿದೆ. ಆಗಸ್ಟ್‌ನಲ್ಲಿ ಪಂಜಾಬ್‌ 25.3 ಸೆಂ.ಮೀ ಮಳೆ ಕಂಡಿದ್ದು, ಇದು ವಾಡಿಕೆಗಿಂತ ಶೇ.74ರಷ್ಟು ಅಧಿಕವಾಗಿದೆ. ಜೊತೆಗೆ 25 ವರ್ಷಗಳಲ್ಲೇ ಸುರಿದ ಅತ್ಯಧಿಕ ಮಳೆಯಾಗಿದೆ.

ವೈಷ್ಣೋ ದೇವಿ ಯಾತ್ರೆ ಬಂದ್‌:ಜಮ್ಮು ಕಾಶ್ಮೀರದ ವೈಷ್ಣೋದೇವಿ ಯಾತ್ರೆಯು ಭಾರಿ ಮಳೆ ಹಿನ್ನೆಲೆಯಲ್ಲಿ ಸತತ 7ನೇ ದಿನವೂ ಬಂದ್‌ ಮಾಡಲಾಗಿತ್ತು.

Read more Articles on