ಸಾರಾಂಶ
ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಮತ್ತೊಮ್ಮೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಪಂಜಾಬ್ ರಾಜ್ಯದಲ್ಲಿ ಬಿಸಿ ಬಿಸಿಯಾಗಿ ಹರಿದಾಡುತ್ತಿದೆ.
ಅಮೃತಸರ: ಮಾಜಿ ಕ್ರಿಕೆಟಿಗ ಮತ್ತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಮತ್ತೆ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಭಾರೀ ಸುದ್ದಿ ಪಂಜಾಬ್‌ನಾದ್ಯಂತ ಹರಿದಾಡುತ್ತಿದೆ.
ಬಿಜೆಪಿಯಿಂದಲೇ ರಾಜಕೀಯ ಆರಂಭಿಸಿ ಬಳಿಕ ಕಾಂಗ್ರೆಸ್ ಸೇರಿದ್ದ ಸಿಧು ಇದೀಗ ಮತ್ತೆ ಬಿಜೆಪಿ ಕಡೆಗೆ ಮುಖಮಾಡಿದ್ದಾರೆ.
ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಅಮೃತಸರ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಬಿಜೆಪಿ ಕೂಡಾ ಒಲವು ತೋರಿದೆ ಎನ್ನಲಾಗಿದೆ.
ಇನ್ನು ಸಿಧು ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಕಾರ್ಯಾದಕ್ಷ್ಯ ರಮಣ್ ಭಕ್ಷಿ ‘ಒಂದು ಪಕ್ಷದಿಂದ ಮತ್ತೊಂದಕ್ಕೆ ಜಿಗಿಯುತ್ತಲೇ ಇರುವ ವ್ಯಕ್ತಿ ತನ್ನ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಾನೆ’ ಎಂದಿದ್ದಾರೆ.
2017ರಲ್ಲಿ ಬಿಜೆಪಿ ತೊರೆದು ಸಿಧು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.