ಸುಮಾರು 50 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಹಾಗೂ 30 ಲಕ್ಷ ರು. ಇನಾಮು ಹೊಂದಿದ್ದ ಕುಖ್ಯಾತ ನಕ್ಸಲ್ ಬ್ರಿಜೇಶ್ ಗುಂಜು ಭಾನುವಾರ ಉತ್ತರಪ್ರದೇಶದ ವಾರಾಣಸಿಯಲ್ಲಿ ಭಯೋತ್ಪಾದನಾ ನಿಗ್ರಹ ದಳ ನಡೆಸಿದ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.
- 20 ವರ್ಷದಿಂದ ನಾಪತ್ತೆ ಆಗಿದ್ದ ಗುಂಜು
ಪಿಟಿಐ ವಾರಣಾಸಿಸುಮಾರು 50 ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಹಾಗೂ 30 ಲಕ್ಷ ರು. ಇನಾಮು ಹೊಂದಿದ್ದ ಕುಖ್ಯಾತ ನಕ್ಸಲ್ ಬ್ರಿಜೇಶ್ ಗುಂಜು ಭಾನುವಾರ ಉತ್ತರಪ್ರದೇಶದ ವಾರಾಣಸಿಯಲ್ಲಿ ಭಯೋತ್ಪಾದನಾ ನಿಗ್ರಹ ದಳ ನಡೆಸಿದ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ.ನಿಷೇಧಿತ ತೃತೀಯ ಪ್ರಸ್ತುತಿ ಸಮಿತಿ (ಟಿಪಿಸಿ) ಪ್ರಮುಖ ಸದಸ್ಯನಾಗಿದ್ದ ಈತ 1996ರಿಂದಲೂ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ. 2 ದಶಕಗಳಿಂದ ತಲೆ ಮರೆಸಿಕೊಂಡಿದ್ದ. ಆತ ವಾರಣಾಸಿ ಪ್ರವೇಶಿಸಿದ್ದಾನೆ ಎನ್ನುವ ಖಚಿತ ಮಾಹಿತಿ ಮೇಲೆ ಎಟಿಎಸ್ ಶೋಧ ಕಾರ್ಯಾಚರಣೆ ಕೈಗೊಂಡಿತ್ತು. ಲಂಕಾ ಮೈದಾನ ಕಡೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಇಬ್ಬರನ್ನು ತಡೆದು ನಿಲ್ಲಿಸಿದಾಗ ಸಿಬ್ಬಂದಿ ಮೇಲೆ ಗುಂಜು ಹಾಗೂ ಆತನ ಸಹಚರ ದಾಳಿ ನಡೆಸಿದ್ದಾರೆ. ಈ ವೇಳೆ ಎಟಿಎಸ್ ಸಿಬ್ಬಂದಿ ಗುಂಡು ಹಾರಿಸಿದ್ದು, ಬ್ರಿಜೇಶ್ ಗಾಯಗೊಂಡು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಮತ್ತೊಂದೆಡೆ ಆತನ ಸಹಚರ ಪರಾರಿಯಾಗಿದ್ದಾನೆ.
ಚಕಮಕಿಯಲ್ಲಿ ಇಬ್ಬರು ಸಿಬ್ಬಂದಿ ಕೂಡ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಎನ್‌ಕೌಂಟರ್ ಸ್ಥಳದಿಂದ ಎರಡು ಪಿಸ್ತೂಲ್‌ಗಳು, ಒಂದು ಕಾರ್ಬೈನ್, ದೊಡ್ಡ ಪ್ರಮಾಣದ ಮದ್ದುಗುಂಡುಗಳು ಮತ್ತು 1 ಲಕ್ಷ ರು. ನಗದು ವಶಪಡಿಸಿಕೊಳ್ಳಲಾಗಿದೆ.