ಸಾರಾಂಶ
ಪ್ರಸಕ್ತ ಲೋಕಸಭೆಗೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 343 ಸ್ಥಾನಗಳನ್ನು ಗೆಲ್ಲಲಿದೆ. ಇನ್ನು ಕಾಂಗ್ರೆಸ್ ನೇತೃತ್ವವದ ಇಂಡಿಯಾ ಮೈತ್ರಿಕೂಟ 188 ಸ್ಥಾನ ಪಡೆಯಲಿದೆ ಎಂದು ಇಂಡಿಯಾ ಟುಡೇ- ಸಿ ವೋಟರ್ ನಡೆಸಿದ ಮೂಡ್ ಆಫ್ ದ ನೇಷನ್ ಸಮೀಕ್ಷೆ ಹೇಳಿದೆ.
ನವದೆಹಲಿ: ಪ್ರಸಕ್ತ ಲೋಕಸಭೆಗೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 343 ಸ್ಥಾನಗಳನ್ನು ಗೆಲ್ಲಲಿದೆ. ಇನ್ನು ಕಾಂಗ್ರೆಸ್ ನೇತೃತ್ವವದ ಇಂಡಿಯಾ ಮೈತ್ರಿಕೂಟ 188 ಸ್ಥಾನ ಪಡೆಯಲಿದೆ ಎಂದು ಇಂಡಿಯಾ ಟುಡೇ- ಸಿ ವೋಟರ್ ನಡೆಸಿದ ಮೂಡ್ ಆಫ್ ದ ನೇಷನ್ ಸಮೀಕ್ಷೆ ಹೇಳಿದೆ.
2024ರ ಲೋಕಸಭಾ ಚುನಾವಣೆಯಲ್ಲಿ 292 ಸ್ಥಾನ ಗೆದ್ದಿದ್ದ ಎನ್‌ಡಿಎ ಮೈತ್ರಿಕೂಟ ಈಗ ಚುನಾವಣೆ ನಡೆದರೆ ಭರ್ಜರಿ 343 ಸ್ಥಾನ ಗೆಲ್ಲಲಿದೆ. ಅಂದರೆ ಅದರ ಸ್ಥಾನಬಲ 51 ಸ್ಥಾನ ಹೆಚ್ಚಾಗಲಿದೆ. ಬಿಜೆಪಿ ಬಲ 240ರಿಂದ 281ಕ್ಕೆ ಏರಲಿದೆ. ಇನ್ನು ಲೋಕಸಭಾ ಚುನಾವಣೆಯಲ್ಲಿ 232 ಸ್ಥಾನ ಗೆದ್ದಿದ್ದ ಇಂಡಿಯಾ ಕೂಟದ ಬಲ 188ಕ್ಕೆ ಇಳಿಯಲಿದೆ. ಅದೇ ರಿತಿ ಕಾಂಗ್ರೆಸ್ ಬಲ 99ರಿಂದ 78ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ಹೇಳಿದೆ.ಅಲ್ಲದೆ ಬಿಜೆಪಿಯ ಮತಪ್ರಮಾಣವು ಶೇ.41ರಷ್ಟು ವೃದ್ಧಿಯಾದರೆ ಕಾಂಗ್ರೆಸ್‌ದು ಶೇ.20ರಷ್ಟು ಕುಸಿತವಾಗಲಿದೆ. ಇಂಡಿಯಾ ಕೂಟದ ಒಳಜಗಳವು ಮತ ಪ್ರಮಾಣಕ್ಕೆ ಕುಸಿತವಾಗಿರಲಿದೆ ಎಂದು ಸಮೀಕ್ಷೆ ಹೇಳಿದೆ.