ಬಿಹಾರದಲ್ಲಿ ಜಂಗಲ್‌ ರಾಜ್ಯ ಸಂಪೂರ್ಣ ತಿರಸ್ಕೃತ: ನಡ್ಡಾ

| Published : Nov 15 2025, 01:45 AM IST

ಸಾರಾಂಶ

‘ಬಿಹಾರದಲ್ಲಿ ಎನ್‌ಡಿಎ ಕೂಟ ದಾಖಲಿಸಿದ ಐತಿಹಾಸಿಕ ಗೆಲುವು ಡಬಲ್‌ ಎಂಜಿನ್ ಸರ್ಕಾರ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಗೆ ವಿಶ್ವಾಸದ ಮುದ್ರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಸಚಿವ ಜೆ.ಪಿ.ನಡ್ಡಾ ಬಣ್ಣಿಸಿದ್ದಾರೆ. ಅಲ್ಲದೇ ‘ಬಿಹಾರ ಜನತೆ ಜಂಗಲ್ ರಾಜ್ಯವನ್ನು ತಿರಸ್ಕರಿಸಿರುವುಕ್ಕೆ ಸಾಕ್ಷಿ’ ಎಂದಿದ್ದಾರೆ.

- ಡಬಲ್‌ ಎಂಜಿನ್‌ ಸರ್ಕಾರ ಮೇಲಿನ ವಿಶ್ವಾಸದ ಮುದ್ರೆ

ನವದೆಹಲಿ: ‘ಬಿಹಾರದಲ್ಲಿ ಎನ್‌ಡಿಎ ಕೂಟ ದಾಖಲಿಸಿದ ಐತಿಹಾಸಿಕ ಗೆಲುವು ಡಬಲ್‌ ಎಂಜಿನ್ ಸರ್ಕಾರ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಗೆ ವಿಶ್ವಾಸದ ಮುದ್ರೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಸಚಿವ ಜೆ.ಪಿ.ನಡ್ಡಾ ಬಣ್ಣಿಸಿದ್ದಾರೆ. ಅಲ್ಲದೇ ‘ಬಿಹಾರ ಜನತೆ ಜಂಗಲ್ ರಾಜ್ಯವನ್ನು ತಿರಸ್ಕರಿಸಿರುವುಕ್ಕೆ ಸಾಕ್ಷಿ’ ಎಂದಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಬಿಹಾರದಲ್ಲಿ ಎನ್‌ಡಿಎ ಪಡೆದಿರುವ ಪ್ರಚಂಡ ಬಹುಮತವು ಜನರು ಮಹಾಘಟಬಂಧನದ ಜಂಗಲ್‌ ರಾಜ್ಯ ಮತ್ತು ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ, ಎನ್‌ಡಿಎ ಕೂಟದ ಉತ್ತಮ ಆಡಳಿತ, ಸ್ಥಿರತೆ ಮತ್ತು ಅಭಿವೃದ್ಧಿಯನ್ನು ಸ್ವೀಕರಿಸಿದ್ದಾರೆ ಎನ್ನುವುದನ್ನು ತೋರಿಸುತ್ತದೆ’ ಎಂದರು.

‘ಬಿಹಾರದಲ್ಲಿ ಎನ್‌ಡಿಎ ಕೂಟ ಜನರಿಂದ ಸ್ವೀಕರಿಸಿರುವ ಈ ಐತಿಹಾಸಿಕ ಬೆಂಬಲ, ಜನರು ಡಬಲ್‌ ಎಂಜಿನ್‌ ಸರ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ನಿತೀಶ್‌ ಕುಮಾರ್‌ ಅವರ ಅಭಿವೃದ್ಧಿ, ಕಲ್ಯಾಣ ಯೋಜನೆಗಳ ಮೇಲೆ ಇಟ್ಟಿರುವ ವಿಶ್ವಾಸದ ಮುದ್ರೆ. ಈ ಅಭೂತಪೂರ್ವ ಜನಾದೇಶ ಬಿಹಾರವನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡುವ ನಮ್ಮ ಸಂಕಲ್ಪಕ್ಕೆ ನಿರ್ದಿಷ್ಟ ರೂಪ ನೀಡುತ್ತದೆ’ ಎಂದು ಹೇಳಿದರು.