ಕೆಟ್ಟು ನಿಂತ ವಂದೇ ಭಾರತ್‌ ಅನ್ನು ಗೂಡ್ಸ್‌ ಎಂಜಿನ್ನಿಂದ ಎಳೆಸಿದರು!

| Published : Sep 10 2024, 01:35 AM IST

ಕೆಟ್ಟು ನಿಂತ ವಂದೇ ಭಾರತ್‌ ಅನ್ನು ಗೂಡ್ಸ್‌ ಎಂಜಿನ್ನಿಂದ ಎಳೆಸಿದರು!
Share this Article
  • FB
  • TW
  • Linkdin
  • Email

ಸಾರಾಂಶ

ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ವಂದೇಭಾರತ ಎಕ್ಸ್‌ಪ್ರೆಸ್‌ ರೈಲು ಉತ್ತರ ಪ್ರದೇಶದ ಎಟಾ ಜಿಲ್ಲೆಯಲ್ಲಿ ನಿಲುಗಡೆ ಆಗಿದ್ದು, ಅದನ್ನು ಗೂಡ್ಸ್‌ ರೈಲಿನ ಎಂಜಿನ್‌ ಸಹಾಯದಿಂದ ಎಳೆಸಿದ ವಿಚಿತ್ರ ಪ್ರಸಂಗ ಸೋಮವಾರ ನಡೆದಿದೆ.

ಲಖನೌ: ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ವಂದೇಭಾರತ ಎಕ್ಸ್‌ಪ್ರೆಸ್‌ ರೈಲು ಉತ್ತರ ಪ್ರದೇಶದ ಎಟಾ ಜಿಲ್ಲೆಯಲ್ಲಿ ನಿಲುಗಡೆ ಆಗಿದ್ದು, ಅದನ್ನು ಗೂಡ್ಸ್‌ ರೈಲಿನ ಎಂಜಿನ್‌ ಸಹಾಯದಿಂದ ಎಳೆಸಿದ ವಿಚಿತ್ರ ಪ್ರಸಂಗ ಸೋಮವಾರ ನಡೆದಿದೆ.

ದೆಹಲಿಯಿಂದ ವಾರಾಣಸಿಗೆ ತೆರಳುತ್ತಿದ್ದ ವಂದೇ ಭಾರತ್ ರೈಲಿನ ಎಂಜಿನ್‌ನಲ್ಲಿ ಬೆಳಿಗ್ಗೆ 9.15ರ ಸುಮಾರಿಗೆ ತಾಂತ್ರಿಕ ದೋಷ ಕಂಡುಬಂದಿದೆ. ಎಂಜಿನಿಯರ್‌ಗಳು ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಆದ್ದರಿಂದ 10.24ಕ್ಕೆ ಗೂಡ್ಸ್‌ ರೈಲಿನ ಎಂಜಿನ್‌ ಮುಖಾಂತರ ಭರ್ತಾನಾ ರೈಲು ನಿಲ್ದಾಣದ ವರೆಗೆ ಎಳೆದುಕೊಂಡು ಬರಲಾಗಿದೆ. ನಂತರ ಅನ್ಯ ರೈಲಲ್ಲಿ ಪ್ರಯಾಣಿಕರನ್ನು ಕಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ರೈಲಿನಲ್ಲಿ ಸುಮಾರು 730 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.