ಸಾರಾಂಶ
2022ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ನ್ಯೂಜಿಲೆಂಡ್‌ನ ತಾರಾ ಆಟಗಾರ ರಾಸ್ ಟೇಲರ್, ನಿವೃತ್ತಿಯಿಂದ ಹೊರಬಂದಿದ್ದಾರೆ.
ವೆಲ್ಲಿಂಗ್ಟನ್: 2022ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ನ್ಯೂಜಿಲೆಂಡ್‌ನ ತಾರಾ ಆಟಗಾರ ರಾಸ್ ಟೇಲರ್, ನಿವೃತ್ತಿಯಿಂದ ಹೊರಬಂದಿದ್ದಾರೆ. ಆದರೆ, ಈ ಬಾರಿ ಅವರು ನ್ಯೂಜಿಲೆಂಡ್ ಬದಲು ಸಮೋವಾ ದೇಶದ ಪರ ಆಡುವುದಾಗಿ ತಿಳಿಸಿದ್ದಾರೆ.
ನ್ಯೂಜಿಲೆಂಡ್ ಪರ 112 ಟೆಸ್ಟ್, 236 ಏಕದಿನ ಹಾಗೂ 102 ಟಿ20 ಪಂದ್ಯಗಳನ್ನಾಡಿರುವ ಟೇಲರ್, ಈಗ ಸಮೋವಾ ಪರ ಮುಂದಿನ ತಿಂಗಳು ನಡೆಯಲಿರುವ 2026ರ ಟಿ20 ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ತಮ್ಮ ತಾಯಿಯ ಮೂಲ ಸಮೋವಾ ಆಗಿರುವ ಕಾರಣ, ಟೇಲರ್‌ಗೆ ಆ ದೇಶದ ಪರ ಆಡಲು ಅರ್ಹತೆ ಸಿಕ್ಕಿದೆ. ಅ.8ರಿಂದ 17ರ ವರೆಗೂ ಒಮಾನ್‌ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ 9 ತಂಡಗಳು ಸೆಣಸಲಿದ್ದು, ಅಗ್ರ-3 ತಂಡಗಳು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ.