ಮಣಿಪುರ: ನಿಷೇಧಿತ 2 ಯುಎನ್ಎಲ್‌ಎಫ್‌ ಉಗ್ರ ನಾಯಕರ ಬಂಧನ

| Published : Mar 14 2024, 02:02 AM IST

ಮಣಿಪುರ: ನಿಷೇಧಿತ 2 ಯುಎನ್ಎಲ್‌ಎಫ್‌ ಉಗ್ರ ನಾಯಕರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಮಣಿಪುರದಲ್ಲಿ ನಿಷೇಧಿತ ಉಗ್ರ ಸಂಘಟನೆಯ ಇಬ್ಬರು ಸದಸ್ಯರನ್ನು ಎನ್‌ಐಎ ಬಂಧಿಸಿದೆ.

ಪಿಟಿಐ ನವದೆಹಲಿ

ಮಣಿಪುರದ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (ಪಿ) ನಿಷೇಧಿತ ಉಗ್ರ ಸಂಘಟನೆಯ ಇಬ್ಬರು ನಾಯಕರನ್ನು ಬುಧವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

ಇತ್ತೀಚಿನ ಮಣಿಪುರ ಗಲಭೆಯಲ್ಲಿ ಇವರ ಕೈವಾಡ ಇತ್ತು. ಹೀಗಾಗಿ ಇವರ ಬಂಧನ ಮಹತ್ವ ಪಡೆದಿದೆ.

ನಿಷೇಧಿತ ಸಂಘಟನೆಯ ಸ್ವಯಂ-ಘೋಷಿತ ಸೇನಾ ಮುಖ್ಯಸ್ಥ ತೋಕ್‌ಚೋಮ್ ತೊಯ್ಬಾ ಮತ್ತು ಯುಎನ್‌ಎಲ್‌ಎಫ್ (ಪಿ) ನ ಐಎನ್‌ಟಿ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಕರ್ನಲ್ ಲೈಮಾಯುಮ್ ಇಂಗ್ಬಾ ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

ತೊಯ್ಬಾ ಬಗ್ಗೆ ಮಾಹಿತಿ ನೀಡಿದವರಿಗೆ ಎನ್‌ಐಎ ನಗದು ಬಹುಮಾನ ಘೋಷಿಸಿತ್ತು.

ಇವರಲ್ಲಿ ಒಬ್ಬ ಸ್ವಯಂಘೋಷಿತ ಸೇನಾ ಮುಖ್ಯಸ್ಥನಾಗಿದ್ದು, ಮತ್ತೊಬ್ಬ ಐಎನ್‌ಟಿ ವಿಭಾಗದ ಮುಖ್ಯಸ್ಥನಾಗಿದ್ದ.