ಅಮೆರಿಕ-ಕೆನಡಾ ಸಂಜಾತ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ಹತ್ಯೆಗೆ ಸಂಚು ರೂಪಿಸಿರುವ ಆರೋಪ ಹೊತ್ತಿರುವ ಭಾರತೀಯ ಮೂಲದ ನಿಖಿಲ್‌ ಗುಪ್ತಾನನ್ನು ಚೆಕ್‌ ಗಣರಾಜ್ಯದಿಂದ ಗಡೀಪಾರು ಮಾಡಿ ಅಮೆರಿಕಕ್ಕೆ ಕರೆತರಲಾಗಿದೆ.

ವಾಷಿಂಗ್ಟನ್‌: ಅಮೆರಿಕ-ಕೆನಡಾ ಸಂಜಾತ ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನು ಹತ್ಯೆಗೆ ಸಂಚು ರೂಪಿಸಿರುವ ಆರೋಪ ಹೊತ್ತಿರುವ ಭಾರತೀಯ ಮೂಲದ ನಿಖಿಲ್‌ ಗುಪ್ತಾನನ್ನು ಚೆಕ್‌ ಗಣರಾಜ್ಯದಿಂದ ಗಡೀಪಾರು ಮಾಡಿ ಅಮೆರಿಕಕ್ಕೆ ಕರೆತರಲಾಗಿದೆ.

ಅಮೆರಿಕದ ಮನವಿಯ ಮೇರೆಗೆ ಕಳೆದ ವರ್ಷವೇ ನಿಖಿಲ್‌ ಗುಪ್ತಾನನ್ನು ಚೆಕ್‌ ಗಣರಾಜ್ಯ ಬಂಧಿಸಿತ್ತು. ಈ ನಡುವೆ ನಿಖಿಲ್‌ ತನ್ನ ಮೇಲೆ ಅಮೆರಿಕ ಸುಳ್ಳು ಆರೋಪ ಹೊರಿಸುತ್ತಿರುವ ಕಾರಣ ತನಗೆ ರಕ್ಷಣೆ ನೀಡುವ ಕುರಿತು ಭಾರತ ಹಾಗೂ ಚೆಕ್‌ ಗಣರಾಜ್ಯದ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿದ್ದ. ಆದರೆ ಎರಡೂ ಕೋರ್ಟ್‌ಗಳು ಆತನ ಮನವಿಯನ್ನು ತಿರಸ್ಕರಿಸಿದ್ದವು.

ನಿಖಿಲ್‌ ಗುಪ್ತಾನನ್ನು ಭಾನುವಾರ ನ್ಯೂಯಾರ್ಕ್‌ಗೆ ಕರೆತಂದು ಸೋಮವಾರ ನ್ಯಾಯಾಲಯದಲ್ಲಿ ಹಾಜರುಪಡಿಸಿ ಅಮೆರಿಕದ ಬ್ರೂಕ್‌ಲಿನ್‌ ಬಂಧನ ಕೇಂದ್ರಕ್ಕೆ ಕಳುಹಿಸಲಾಗಿದೆ. ಆದರೆ ಈ ಹತ್ಯೆ ಸಂಚಿನಲ್ಲಿ ತನ್ನ ಪಾತ್ರವಿಲ್ಲ ಎಂದು ಭಾರತ ಈ ಹಿಂದೆಯೇ ಸ್ಪಷ್ಟಪಡಿಸಿತ್ತು.