ಪಿಎಂ ಆವಾಸ್‌ ಯೋಜನೆಯಡಿ ಮಧ್ಯಮ ವರ್ಗದವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರ ನೆರವು

| Published : Feb 02 2024, 01:04 AM IST / Updated: Feb 02 2024, 11:56 AM IST

Union Budget-2024 HOUSING SECTOR
ಪಿಎಂ ಆವಾಸ್‌ ಯೋಜನೆಯಡಿ ಮಧ್ಯಮ ವರ್ಗದವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರ ನೆರವು
Share this Article
  • FB
  • TW
  • Linkdin
  • Email

ಸಾರಾಂಶ

ಬಡವರು ಮತ್ತು ಮಧ್ಯಮ ವರ್ಗದವರು ಮನೆ ಕಟ್ಟಿಕೊಳ್ಳಲು ಸದ್ಯದಲ್ಲೇ ಹೊಸ ಯೋಜನೆ ಘೋಷಣೆ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಅಲ್ಲದೆ ಪಿಎಂ ಆವಾಸ್‌ ಯೋಜನೆಯಡಿ ಬಡವರಿಗೆ ಇನ್ನೂ 2 ಕೋಟಿ ಮನೆ ಕಟ್ಟುವುದಾಗಿ ತಿಳಿಸಿದ್ದಾರೆ.

ಮಧ್ಯಮ ವರ್ಗದವರ ಸ್ವಂತ ಮನೆಯ ಕನಸು ನನಸು ಮಾಡಲು ಶೀಘ್ರದಲ್ಲೇ ಹೊಸ ಯೋಜನೆಯೊಂದನ್ನು ಘೋಷಿಸುವುದಾಗಿ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದಾರೆ. 

ಅಲ್ಲದೆ, ಪಿಎಂ ಆವಾಸ್‌ ಯೋಜನೆಯಡಿ ಗ್ರಾಮೀಣ ಪ್ರದೇಶದ ಬಡವರಿಗೆ ಇನ್ನೂ 2 ಕೋಟಿ ಮನೆಗಳನ್ನು ನಿರ್ಮಿಸಲು ನೆರವು ನೀಡುವುದಾಗಿಯೂ ಘೋಷಿಸಿದ್ದಾರೆ.‘ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ಪ್ರತಿಯೊಬ್ಬರಿಗೂ ಮನೆ, ನೀರು, ವಿದ್ಯುತ್‌, ಅಡುಗೆ ಅನಿಲ ಮತ್ತು ಬ್ಯಾಂಕ್‌ ಖಾತೆ ನೀಡುವ ಮೂಲಕ ಎಲ್ಲರನ್ನೂ ಒಳಗೊಂಡು ಸಮಗ್ರ ಅಭಿವೃದ್ಧಿ ಸಾಧಿಸಲು ಶ್ರಮಿಸಿದೆ. 

ಅದರಂತೆ ಈಗ ಬಾಡಿಗೆ ಮನೆಯಲ್ಲಿ ಅಥವಾ ಕೊಳೆಗೇರಿ ಪ್ರದೇಶಗಳಲ್ಲಿ ಅಥವಾ ಅಕ್ರಮ ಒತ್ತುವರಿ ಜಾಗದಲ್ಲಿ ವಾಸಿಸುತ್ತಿರುವವರಿಗೆ ಸ್ವಂತ ಮನೆ ಕೊಳ್ಳಲು ಅಥವಾ ಕಟ್ಟಿಕೊಳ್ಳಲು ನೆರವು ನೀಡಲಿದೆ. 

ಇದಕ್ಕಾಗಿ ಶೀಘ್ರದಲ್ಲೇ ಹೊಸ ಯೋಜನೆ ಪ್ರಕಟಿಸಲಾಗುವುದು’ ಎಂದು ತಿಳಿಸಿದ್ದಾರೆ.‘ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ಸವಾಲಿನ ನಡುವೆಯೂ ಪಿಎಂ ಆವಾಸ್‌ ಯೋಜನೆಯಡಿ ಬಡವರಿಗೆ ಮನೆ ಕಟ್ಟಿಕೊಡುವುದನ್ನು ನಿಲ್ಲಿಸಿಲ್ಲ. 

ಹೀಗಾಗಿ 3 ಕೋಟಿ ಮನೆ ಕಟ್ಟಿಕೊಡುವ ಗುರಿ ತಲುಪುವುದಕ್ಕೆ ಸನಿಹದಲ್ಲಿದ್ದೇವೆ. ಅದರ ಜೊತೆಗೆ ಮುಂದಿನ ಐದು ವರ್ಷಗಳಲ್ಲಿ ಇನ್ನೂ 2 ಕೋಟಿ ಮನೆಗಳನ್ನು ಬಡವರಿಗೆ ಕಟ್ಟಿಕೊಡುತ್ತೇವೆ’ ಎಂದು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರ ಈ ಹಿಂದೆ ಘೋಷಿಸಿದ್ದಂತೆ ‘ಎಲ್ಲರಿಗೂ ಮನೆ’ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಬಡವರಿಗೆ ಮನೆ ಕಟ್ಟಿಕೊಡಲು 2016ರ ಏ.1ರಿಂದ ‘ಪ್ರಧಾನಮಂತ್ರಿ ಆವಾಸ್‌ ಯೋಜನೆ- ಗ್ರಾಮೀಣ’ ಜಾರಿಗೊಳಿಸಿತ್ತು. 

ಅದರಡಿ 2024ರ ಮಾರ್ಚ್‌ ಒಳಗೆ 2.95 ಪಕ್ಕಾ ಮನೆಗಳನ್ನು ಮೂಲಭೂತ ಸೌಕರ್ಯಗಳೊಂದಿಗೆ ನಿರ್ಮಿಸುವುದಾಗಿ ತಿಳಿಸಿತ್ತು. ಆ ಗುರಿ ಬಹುತೇಕ ಈಡೇರುತ್ತಿದೆ ಎಂದು ನಿರ್ಮಲಾ ಹೇಳಿದ್ದಾರೆ.ಗ್ರಾಮೀಣ ಪ್ರದೇಶಗಳಲ್ಲಿ