25 ವರ್ಷಗಳಲ್ಲಿ ಮೊದಲ ಬಾರಿ ಐಟಿ ಉದ್ಯಮದಲ್ಲಿ ನೇಮಕಾತಿ ಕುಂಠಿತ

| Published : Oct 31 2023, 01:15 AM IST

25 ವರ್ಷಗಳಲ್ಲಿ ಮೊದಲ ಬಾರಿ ಐಟಿ ಉದ್ಯಮದಲ್ಲಿ ನೇಮಕಾತಿ ಕುಂಠಿತ
Share this Article
  • FB
  • TW
  • Linkdin
  • Email

ಸಾರಾಂಶ

10 ಪ್ರಮುಖ ಕಂಪನಿಗಳಲ್ಲಿ 20 ಲಕ್ಷ ಉದ್ಯೋಗ ನಷ್ಟ. ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದ ವರದಿ ಬಿಡುಗಡೆ.
ನವದೆಹಲಿ: ದೇಶದ ಆರ್ಥಿಕತೆ ಅಭಿವೃದ್ಧಿಯಲ್ಲಿ ಪ್ರಮುಖ ಸ್ಥಾನದಲ್ಲಿ ಗುರುತಿಸಿಕೊಳ್ಳುವ ಐಟಿ ಉದ್ಯಮದಲ್ಲಿ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನೇಮಕಾತಿ ಕುಂಠಿತಗೊಂಡಿದೆ. ದೇಶದ ಪ್ರಮುಖ 10 ಐಟಿ ಕಂಪನಿಗಳಲ್ಲಿನ ಉದ್ಯೋಗಿಗಳ ಸಂಖ್ಯೆ ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದ ಅಂತ್ಯಕ್ಕೆ 20 ಲಕ್ಷದಷ್ಟು ಕಡಿಮೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಮಾಧ್ಯಮ ಸಂಸ್ಥೆಯೊಂದು ನಡೆಸಿರುವ ಅಧ್ಯಯನದ ಪ್ರಕಾರ, ವೆಚ್ಚ ಉಳಿತಾಯಕ್ಕಾಗಿ ಕೈಗೊಂಡ ಕ್ರಮಗಳು, ಭೌಗೋಳಿಕ ಅಪಾಯಗಳಿಂದಾಗಿ ದೇಶದ 10 ಪ್ರಮುಖ ಕಂಪನಿಗಳಲ್ಲಿ 9 ಕಂಪನಿಗಳಲ್ಲಿ ಜುಲೈ-ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಉದ್ಯೋಗಿಗಳ ಸಂಖ್ಯೆ ಕುಸಿತ ಕಂಡಿದೆ. 2024ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಆರ್ಥಿಕ ವರ್ಷದ ಆರಂಭದಲ್ಲಿ ಹೊಂದಿದ್ದ ಉದ್ಯೋಗಿಗಳ ಪ್ರಮಾಣಕ್ಕಿಂತ ಈ ಕಂಪನಿಗಳಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗಿರಲಿದೆ ಎಂದು ವರದಿ ತಿಳಿಸಿದೆ. ಆರ್ಥಿಕ ವರ್ಷದ ಆರಂಭದಲ್ಲಿ ಈ ಕಂಪನಿಗಳಲ್ಲಿ ಉದ್ಯೋಗಿಗಳ ಸಂಖ್ಯೆ 21 ಲಕ್ಷದಷ್ಟಿತ್ತು. ಆದರೆ ‘ಎಲ್‌ ಅಂಡ್‌ ಟಿ’ ಕಂಪನಿ ಮಾತ್ರ ಈ ತ್ರೈಮಾಸಿಕದಲ್ಲಿ 32 ಮಂದಿ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದ್ದು, ಕಂಪನಿಯಲ್ಲಿನ ಉದ್ಯೋಗಿಗಳ ಸಂಖ್ಯೆ ಸಾರ್ವಕಾಲಿಕ ಗರಿಷ್ಠವಾದ 22,265ಕ್ಕೆ ಏರಿಕೆಯಾಗಿದೆ. ಉಳಿದ ಕಂಪನಿಗಳಲ್ಲಿ ಈ ತ್ರೈಮಾಸಿಕದಲ್ಲಿ 51,744 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. === 2022ರಲ್ಲಿ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದ ಕಂಪನಿಗಳು ಟಿಸಿಎಸ್‌- 6.16 ಲಕ್ಷ ವಿಪ್ರೋ - 2.62 ಲಕ್ಷ ಟೆಕ್‌ ಮಹೀಂದ್ರಾ - 1.63 ಲಕ್ಷ ಎಲ್‌ಟಿಐ - 86 ಸಾವಿರ