ಸಾರಾಂಶ
2025ರಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಯಾವುದೇ ನೇಮಕಾತಿ ಪರೀಕ್ಷೆಗಳನ್ನು ನಡೆಸುವುದಿಲ್ಲ. ಬದಲಿಗೆ ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಗಳ ಮೇಲಷ್ಟೇ ಗಮನ ಹರಿಸಲಿದೆ.
- ಪ್ರವೇಶ ಪರೀಕ್ಷೆ ಮಾತ್ರ ಎನ್‌ಟಿಎನಿಂದ ಆಯೋಜನೆ
- ಕೇಂದ್ರೀಯ ಪಠ್ಯಪುಸ್ತಕ ಮುದ್ರಣ ಹೆಚ್ಚಳ, ಬೆಲೆ ಇಳಿಕೆ==- 2026ರಲ್ಲಿ 9-12 ಕ್ಲಾಸ್‌ಗೆ ಹೊಸ ಪಠ್ಯನವದೆಹಲಿ: 2025ರಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಯಾವುದೇ ನೇಮಕಾತಿ ಪರೀಕ್ಷೆಗಳನ್ನು ನಡೆಸುವುದಿಲ್ಲ. ಬದಲಿಗೆ ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಗಳ ಮೇಲಷ್ಟೇ ಗಮನ ಹರಿಸಲಿದೆ. ಪರೀಕ್ಷೆಗಳಲ್ಲಾಗುವ ದೋಷಗಳನ್ನು ಶೂನ್ಯಕ್ಕೆ ಇಳಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಎನ್‌ಟಿಎ ನಡೆಸಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಹಾಗೂ ಅನ್ಯ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಸಾಲುಸಾಲು ಪರೀಕ್ಷೆಗಳ ರದ್ದತಿ ಆಗಿದ್ದವು. ಹೀಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.ಇದೇ ವೇಳೆ, ‘ಮುಂದಿನ ವರ್ಷ 15 ಕೋಟಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಮುದ್ರಿಸಲಾಗುವುದು. ಅವುಗಳ ಬೆಲೆಯನ್ನು ಕಡೆಮೆ ಮಾಡಲಾಗುವುದು. 2026ರಲ್ಲಿ 9-12 ಕ್ಲಾಸ್‌ಗೆ ಹೊಸ ಪಠ್ಯ ಬರಲಿದೆ’ ಎಂದು ಪ್ರಧಾನ್ ತಿಳಿಸಿದರು.