ತೆಲಂಗಾಣ ರಾಜ್ಯದಲ್ಲಿ ವಾರದಲ್ಲಿ 500 ಬೀದಿ ನಾಯಿಗಳ ಮಾರಣಹೋಮಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಅಂಶವೊಂದು ಹೊರ ಬಿದ್ದಿದ್ದು, ವಿಷದ ಚುಚ್ಚುಮದ್ದು ಚುಚ್ಚಿ ನಾಯಿಗಳನ್ನು ಹತ್ಯೆ ಮಾಡುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

 ಹೈದರಾಬಾದ್‌ : ತೆಲಂಗಾಣ ರಾಜ್ಯದಲ್ಲಿ ವಾರದಲ್ಲಿ 500 ಬೀದಿ ನಾಯಿಗಳ ಮಾರಣಹೋಮಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಅಂಶವೊಂದು ಹೊರ ಬಿದ್ದಿದ್ದು, ವಿಷದ ಚುಚ್ಚುಮದ್ದು ಚುಚ್ಚಿ ನಾಯಿಗಳನ್ನು ಹತ್ಯೆ ಮಾಡುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. 

ತೆಲಂಗಾಣದ ಹನುಮಕೊಂಡ ಜಿಲ್ಲೆಯಲ್ಲಿ ಶ್ವಾನಗಳ ಹತ್ಯೆ

ತೆಲಂಗಾಣದ ಹನುಮಕೊಂಡ ಜಿಲ್ಲೆಯ ಶಯಂಪೇಟೆ ಮತ್ತು ಅರೆಪಲ್ಲಿ ಹಳ್ಳಿಯಲ್ಲಿ 300, ಕಾಮರೆಡ್ಡಿ ಜಿಲ್ಲೆಯಲ್ಲಿ 200 ಸೇರಿ ಒಟ್ಟು 500 ಶ್ವಾನಗಳನ್ನು ಹತ್ಯೆಗೈದಿರುವ ಘಟನೆ ಬೆಳಕಿಗೆ ಬಂದಿತ್ತು. ಪ್ರಕರಣದ ತನಿಖೆ ಜಾಡು ಹಿಡಿದ ಪೊಲೀಸರು ಚುಚ್ಚು ಮದ್ದು ಬಳಸಿ ಹತ್ಯೆ ಮಾಡಿರುವುದು ವಿಡಿಯೋ ಸಮೇತ ಪತ್ತೆಯಾಗಿದೆ.

ಬೀದಿ ನಾಯಿ ಹಾವಳಿ ತಡೆಯಲು ಚುನಾವಣೆಯಲ್ಲಿ ಭರವಸೆ

ಸರಪಂಚರು ಬೀದಿ ನಾಯಿ ಹಾವಳಿ ತಡೆಯಲು ಚುನಾವಣೆಯಲ್ಲಿ ಭರವಸೆ ನೀಡಿದ್ದರು. ಅದನ್ನು ಈಡೇರಿಸಲು ಹೀಗೆ ಮಾಡಿದ್ದರು ಎಂದೂ ದೃಢಪಟ್ಟಿದೆ. ಜಗ್ತಿಯಾಲ್‌ ಜಿಲ್ಲೆಯ ಧರ್ಮಪುರಿ ಪುರಸಭೆಯಲ್ಲಿ ಒಬ್ಬ ವ್ಯಕ್ತಿ ನಾಯಿಗೆ ವಿಷದ ಇಂಜೆಕ್ಷನ್‌ ಚುಚ್ಚಿದ್ದಾನೆ. ಈ ವೇಳೆ ಕ್ಷಣ ಮಾತ್ರದಲ್ಲಿ ಶ್ವಾನ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿರುವುದು ಸೆರೆಯಾಗಿದೆ. ಅಲ್ಲದೇ ಬೀದಿಯಲ್ಲಿ ಮತ್ತೆರೆಡು ಬೀದಿ ನಾಯಿಗಳು ಇದೇ ರೀತಿಯಲ್ಲಿ ಸಾವನ್ನಪ್ಪಿವೆ. ಇದೇ ಪುರಸಭೆಯಲ್ಲಿ 50 ಶ್ವಾನಗಳನ್ನು ಇದೇ ರೀತಿ ಹತ್ಯೆ ಮಾಡಲಾಗಿದದೆ. ಈ ಸಂಬಂಧ 2 ಜಿಲ್ಲೆಗಳಲ್ಲಿ 7 ಗ್ರಾ.ಪಂ.ಗಳ ಸರಪಂಚ್‌ ಸೇರಿದಂತೆ ಒಟ್ಟು 15 ಮಂದಿಯ ಬಂಧನವಾಗಿದೆ.