ಸಾರಾಂಶ
ಪಾಕಿಸ್ತಾನ ಮತ್ತು ಪಿಓಕೆ ಮೇಲೆ ಭಾರತದ ಪಡೆಗಳು ನಡೆಸಿರುವ ಆಪರೇಷನ್ ಸಿಂಧೂರ್ ನಿಖರವಾದ ಯೋಜನೆಯಂತೆಯೇ ಆಗಿದೆ. ನಮ್ಮವರ ಕೊಂದವರನ್ನು ಮಾತ್ರ ಹತ್ಯೆ ಮಾಡಿದ್ದೇವೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ನವದೆಹಲಿ: ‘ಪಾಕಿಸ್ತಾನ ಮತ್ತು ಪಿಓಕೆ ಮೇಲೆ ಭಾರತದ ಪಡೆಗಳು ನಡೆಸಿರುವ ಆಪರೇಷನ್ ಸಿಂಧೂರ್ ನಿಖರವಾದ ಯೋಜನೆಯಂತೆಯೇ ಆಗಿದೆ. ನಮ್ಮವರ ಕೊಂದವರನ್ನು ಮಾತ್ರ ಹತ್ಯೆ ಮಾಡಿದ್ದೇವೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ದಾಳಿ ಬಳಿಕ ಪ್ರತಿಕ್ರಿಯಿಸಿದ ಸಿಂಗ್, ‘ಭಾರತವು ತನ್ನ ನೆಲದ ಮೇಲಿನ ದಾಳಿಗೆ ಪ್ರತಿಕ್ರಿಯಿಸುವ ತನ್ನ ಹಕ್ಕನ್ನು ಚಲಾಯಿಸಿದೆ. ನಮ್ಮ ಕ್ರಮವನ್ನು ಬಹಳ ಚಿಂತನಶೀಲವಾಗಿ ಮತ್ತು ಅಳತೆ ಮಾಡಿದ ರೀತಿಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಜೊತೆಗೆ ದಾಳಿಯನ್ನು ಕೊಂಡಾಡಿದರು.
ನಾವು ನಮ್ಮವರನ್ನು ಕೊಂದವರನ್ನು ಮಾತ್ರ ಹತ್ಯೆ ಮಾಡಿದ್ದೇವೆ. ಭಯೋತ್ಪಾದಕರ ಜಂಘಾಬಲ ಅಡಗಿಸುವ ಗುರಿಯೊಂದಿಗೆ ಈ ಕ್ರಮವು ಅವರ ಶಿಬಿರಗಳು ಮತ್ತು ಇತರ ಮೂಲಸೌಕರ್ಯಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು.
ಇದಿಷ್ಟೇ ಅಲ್ಲದೇ ನಾವು ನಾವುದೇ ನಾಗರಿಕರ ಸಾವಾಗದಂತೆ ಸೂಕ್ಷ್ಮತೆಯಿಂದ ಕೆಲಸ ಮಾಡಿದ್ದೇವೆ. ಆಪರೇಷನ್ ಸಿಂಧೂರ್ ಮೂಲಕ ಉಗ್ರರಿಗೆ ಸರಿಯಾಗಿ ಉತ್ತರಿಸಿದ್ದೇವೆ ಎಂದು ಸಿಂಗ್ ಹೇಳಿದರು.