ಕೇರಳ : 2 ನಟರ ಕಾರು ಸೇರಿ 36 ಸ್ಮಗ್ಲಿಂಗ್‌ ಕಾರು ವಶ

| N/A | Published : Sep 25 2025, 01:00 AM IST

ಸಾರಾಂಶ

ಭೂತಾನ್ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಲಾದ ಐಷಾರಾಮಿ ಕಾರುಗಳ ಪತ್ತೆಗೆ ಇಳಿದಿರುವ ಕೇರಳದ ಕೊಚ್ಚಿಯ ಕಸ್ಟಮ್ಸ್ (ಪ್ರಿವೆಂಟಿವ್) ಕಮಿಷನರೇಟ್, ಮಂಗಳವಾರ ಕೇರಳದಾದ್ಯಂತ ಏಕಕಾಲದಲ್ಲಿ ದಾಳಿ ನಡೆಸಿ ಇಬ್ಬರು ನಟರ ಕಾರುಗಳು ಸೇರಿದಂತೆ 36 ಪ್ರೀಮಿಯಂ ಕಾರುಗಳನ್ನು ವಶಪಡಿಸಿಕೊಂಡಿದೆ.

ಕೊಚ್ಚಿ: ಭೂತಾನ್ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಲಾದ ಐಷಾರಾಮಿ ಕಾರುಗಳ ಪತ್ತೆಗೆ ಇಳಿದಿರುವ ಕೇರಳದ

ಕೊಚ್ಚಿಯ ಕಸ್ಟಮ್ಸ್ (ಪ್ರಿವೆಂಟಿವ್) ಕಮಿಷನರೇಟ್, ಮಂಗಳವಾರ ಕೇರಳದಾದ್ಯಂತ ಏಕಕಾಲದಲ್ಲಿ ದಾಳಿ ನಡೆಸಿ ಇಬ್ಬರು ನಟರ ಕಾರುಗಳು ಸೇರಿದಂತೆ 36 ಪ್ರೀಮಿಯಂ ಕಾರುಗಳನ್ನು ವಶಪಡಿಸಿಕೊಂಡಿದೆ. ‘ಈ ಕಾರುಗಳನ್ನು ಆಮದು ಮಾಡಿಕೊಳ್ಳಲಾಗಿದ್ದು, ಕಸ್ಟಮ್ಸ್ ಸುಂಕವನ್ನು ತಪ್ಪಿಸಿ, ನಕಲಿ ದಾಖಲೆಗಳನ್ನು ಬಳಸಿ ನೋಂ ದಾಯಿಸಲಾಗಿದೆ. 

ಪರಿಶೀಲನೆಗೆ ಒಳಗಾದವರಲ್ಲಿ ಪ್ರಸಿದ್ಧ ಮಲಯಾಳಂ ನಟರೂ ಸೇರಿದ್ದಾರೆ. ನಟ ದುಲ್ಕರ್ ಸಲ್ಮಾನ್ ಹೆಸರಿನಲ್ಲಿ ನೋಂದಾಯಿಸಲಾದ 2 ಕಾರು ಮತ್ತು ನಟ ಅಮಿತ್ ಚಕ್ಕಲಕ್ಕಲ್ ಅವರಿಗೆ ಸೇರಿದ 6 ಕಾರುಗಳನ್ನುವಶಪಡಿಸಿಕೊಳ್ಳಲಾಗಿದೆ’ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಈ ಪಟ್ಟಿಯಲ್ಲಿ ಸಲ್ಮಾನ್‌ಗೆ ಸಂಬಂಧಿಸಿದ ಲ್ಯಾಂಡ್ ರೋವರ್‌ ಡಿಫೆಂಡರ್ ಮತ್ತು ಟೊಯೋಟಾ ಪ್ರಾಡೊ ಸೇರಿವೆ. ಅವರ ಇನ್ನೂ 1 ವಾಹನ ಮತ್ತು ಚಕ್ಕಲಕ್ಕಲ್‌ಗೆ ಸೇರಿದ ಇನ್ನೂ ಎರಡು ಕಾರು ಪರಿಶೀಲನೆಯಲ್ಲಿವೆ. ಕಸ್ಟಮ್ಸ್ ಅಧಿಕಾರಿಗಳು ನಟ ಪೃಥ್ವಿರಾಜ್ ಅವರ ನಿವಾಸವನ್ನು ಸಹ ಪರಿಶೀಲಿಸಿದ್ದರೂ, ಅವರ ಯಾವುದೇ ವಾಹನ ವಶಕ್ಕೆ ಪಡೆದಿಲ್ಲ.ಇನ್ನೂ ಕೆಲವು ಉದ್ಯಮಿಗಳ ಮನೆಗಳ ಮೇಲೂ ದಾಳಿ ನಡೆದಿದೆ. ಕೇರಳದಲ್ಲಿ ಇಂತಹ 100-200 ಕಾರು ಇರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. 

ಈ ಸಂಬಂಧ ನಟರು ಸೇರಿ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲು ತೀರ್ಮಾನಿಸಲಾಗಿದೆ. ‘ಕಾರುಗಳು ಕಳ್ಳಸಾಗಣೆ ಆಗಿದ್ದು ಎಂದು ಗೊತ್ತಿದ್ದೇ ಖರೀದಿಸಲಾಗಿದೆಯೇ’ ಎಂದು ಅವರಿಗೆ ವಿಚಾರಣೆ ವೇಳೆ ಕೇಳಲಾಗುತ್ತದೆ.

- ಭೂತಾನ್‌ ಮೂಲಕ ಕಳ್ಳಸಾಗಣೆ ಮಾಡಿ ಕಸ್ಟಮ್ಸ್‌ ವಂಚನೆ

- ನಕಲಿ ದಾಖಲೆ ಬಳಸಿ ಭಾರತದಲ್ಲಿ ನೋಂದಣಿ

- ದುಲ್ಕರ್‌ ಸಲ್ಮಾನ್‌, ಅಮಿತ್‌ ಅವರ ಕಾರುಗಳು ಜಪ್ತಿ

Read more Articles on